Friday, 16th May 2025

ಗಾರ್ಲಿಕ್ ಅಂದ್ರೆ ಶುಂಠಿ, ಅಲ್ಲಲ್ಲಾ ಬೆಳ್ಳುಳ್ಳಿ.. ಇಲ್ಲ ಶುಂಠಿಯೇ ಇರಬಹುದು: ಸಚಿವರ ಗೊಂದಲ !

Pakistan minister fawad chaudhari
Garlicಇಸ್ಲಾಮಾಬಾದ್: ಇಂಗ್ಲೀಷ್ ನಲ್ಲಿ ಗಾರ್ಲಿಕ್ (ಬೆಳ್ಳುಳ್ಳಿ) ಅಂದರೆ ಶುಂಠಿ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಹೇಳಿರುವುದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್ ಅವರು ಸಚಿವರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೀಷ್ ನಲ್ಲಿ ಗಾರ್ಲಿಕ್ ಅಂದರೆ ಶುಂಠಿ ಎಂದ ಮಾಹಿತಿ ಸಚಿವ ಫವಾದ್ ಚೌಧರಿ. ಒಬ್ಬ ವ್ಯಕ್ತಿಯು ಪ್ರತಿದಿನ ಹೊಸದನ್ನು ಕಲಿಯುತ್ತಾನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.Ginger

ಈರುಳ್ಳಿ, ಬೆಳ್ಳುಳ್ಳಿ ಬೆಲೆ ತೀರಾ ಕುಸಿದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ಹಿಂದಿಯಲ್ಲಿ ಮಾತನಾಡುತ್ತಾ, ಬೆಳ್ಳುಳ್ಳಿ ಹಾಗೂ ಶುಂಠಿಗೆ ಇಂಗ್ಲೀಷ್ ನಲ್ಲಿ ಏನು ಹೇಳುತ್ತಾರೆ ಎಂಬ ಬಗ್ಗೆ ಕನ್ಫ್ಯೂಸ್ ಆಗಿದ್ದಾರೆ. ಗಾರ್ಲಿಕ್ ಅಂದ್ರೆ ಶುಂಠಿ, ಅಲ್ಲಲ್ಲಾ ಬೆಳ್ಳುಳ್ಳಿ.. ಇಲ್ಲ ಶುಂಠಿಯೇ ಇರಬಹುದು ಎಂದು ಸಚಿವರು ಗೊಂದಲಕ್ಕೊಳಗಾಗಿದ್ದಾರೆ.

ಸಚಿವರ ಶುಂಠಿ-ಬೆಳ್ಳುಳ್ಳಿ ಕನ್ಫ್ಯೂಸ್ ಗೆ ನೆಟ್ಟಿಗರು ಉಲ್ಲಾಸದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈ ವಿಡಿಯೋ 1600ಕ್ಕೂ ಹೆಚ್ಚು ರೀಟ್ವೀಟ್ ಗಳಿಸಿದೆ. ಶುಂಠಿ ಮತ್ತು ಬೆಳ್ಳುಳ್ಳಿಯ ನಡುವೆ ಗೊಂದಲಕ್ಕೀಡಾಗುವುದು ಅಸಾಮಾನ್ಯವೇನಲ್ಲ ಎಂದು ಹಲವು ಬಳಕೆ ದಾರರು ಬೆಂಬಲಿಸಿದ್ದಾರೆ. ಅನೇಕರು ಸಚಿವರನ್ನು ಬಾಲ್ಯದಲ್ಲಿ ಯಾವ ಶಾಲೆಗೆ ಹೋಗಿದ್ದರು ಎಂದು ಟ್ರೋಲ್ ಮಾಡಿದ್ದಾರೆ.covid