Monday, 12th May 2025

Fraud Case :ಇನ್ಶೂರೆನ್ಸ್ ಕಂಪನಿಯಿಂದ ಹಣ ಪೀಕಲು ಕರಡಿ ವೇಷ ಧರಿಸಿ ರೋಲ್ಸ್‌ ರಾಯ್ಸ್‌ ಕಾರಿಗೆ ಹಾನಿ; ಈ ಕಿಲಾಡಿಗಳು ಸಿಕ್ಕಿ ಬಿದ್ದಿದ್ದೇ ರೋಚಕ!

Fraud Case

ಲಾಸ್‌ಎಂಜಲೀಸ್‌ : ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಜನರನ್ನು ಮರಳು ಮಾಡುವ ಹಾಗೂ ಮೋಸಗೊಳಿಸುವವರ ಕತೆಯನ್ನು ಕೇಳಿರುತ್ತೇವೆ ಇಲ್ಲಾ ನೋಡಿರುತ್ತೇವೆ. ಆದರೆ ಇಲ್ಲೊಂದಿಷ್ಟು ಸ್ನೇಹಿತರು ವಿಮಾ ಕಂಪನಿಗೆ (Insurance Company) ಮೋಸ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಐಶಾರಾಮಿ ಕಾರಿಗೆ ಕರಡಿ ಹಾನಿ ಮಾಡಿದೆ ಎಂದು ಸುಳ್ಳು ಸಾಕ್ಷಿ (Fraud Case) ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕ್ಯಾಲಿಫೋರ್ನಿಯಾದ ಕೆಲ ಸ್ನೇಹಿತರ ಗುಂಪೊಂದು ವಿಮಾ ಕಂಪನಿಯಂದ ಪರಿಹಾರ ಪಡೆಯಲು ತಮ್ಮ ರೋಲ್ಸ್‌ ರಾಯ್ಸ್‌ ಕಾರಿಗೆ ಕರಡಿಯೊಂದು ಹಾನಿ ಮಾಡಿದೆ ಎಂದು ದೂರು ನೀಡಿದ್ದರು. ನಂತರ ಕಂಪನಿಯವರ ಬಳಿ ಕರಡಿ ದಾಳಿ ಮಾಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿ ಪರಿಹಾರ ನೀಡುವಂತೆ ಕೋರಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷವಾಗಿ ಗಮನಿಸಿದ ವಿಮಾ ಕಂಪನಿ ಇದರಲ್ಲೇನೋ ಮೋಸವಿದೆ ಎಂದು ಗಮಿಸಿದ್ದರು. ನಂತರ ತನಿಖೆ ಆರಂಭಿಸಿದ ವಿಮಾ ಕಂಪನಿಯವರಿಗೆ ಶಾಕ್‌ ಕಾದಿತ್ತು. ಕ್ಯಾಲಿಫೋರ್ನಿಯಾ ವನ್ಯಜೀವಿ ವಿಭಾಗದ ಜೀವಶಾಸ್ತ್ರಜ್ಞರು ವೀಡಿಯೊವನ್ನು ಪರಿಶೀಲಿಸಿ ಇದು ಕರಡಿಯ ವೇಷಭೂಷಣದಲ್ಲಿರುವ ವ್ಯಕ್ತಿ ಎಂದು ಸೂಚಿಸಿದ್ದರು. ಹೆಚ್ಚಿನ ತನಿಖೆಯಿಂದ ಕರಡಿ ವೇಶದಲ್ಲಿ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ವಿಮಾ ಕಂಪನಿಯಿಂದ ಹಣ ವಸೂಲಿ ಮಾಡುವ ಸಲುವಾಗಿ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕರಡಿ ದಾಳಿ ಬಗ್ಗೆ ದೂರು ನೀಡಿದ ಗುಂಪಿನ ಸದಸ್ಯನೊಬ್ಬ ಕರಡಿ ವೇಶ ಧರಿಸಿ ಕಾರಿನ ಒಳಗೆ ಪ್ರವೇಶಿಸಿಸುತ್ತಾನೆ. ನಂತರ ಐಶಾರಾಮಿ ಕಾರಿನ ಕಿಟಕಿ, ಸೀಟು ಸೇರಿದಂತೆ ಬಾಗಿಲುಗಳಿಗೆ ಹಾನಿ ಮಾಡುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Viral Video: ದೇಗುಲದೊಳಗೇ ಹಿಂದೂ ಯುವತಿಯೊಂದಿಗೆ ಚಕ್ಕಂದ! ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ; ವಿಡಿಯೋ ಫುಲ್‌ ವೈರಲ್‌

ಸದ್ಯ ಆರೋಪಿಗಳಾದ ರೂಬೆನ್ ತಮ್ರಾಜಿಯಾನ್, ಅರರಾತ್ ಚಿರ್ಕಿನಿಯನ್, ವಹೆ ಮುರಾದ್ಖಾನ್ಯನ್ ಮತ್ತು ಅಲ್ಫಿಯಾ ಜುಕರ್‌ಮ್ಯಾನ್ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಮನೆಯಲ್ಲಿ ಕರಡಿ ವೇಶ, ಉಗುರುಗಳು ಹಾಗೂ ಮುಸುಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.