Sunday, 11th May 2025

ಫ್ರಾನ್ಸ್​ನಲ್ಲಿ 5.8 ತೀವ್ರತೆಯಲ್ಲಿ ಭೂಕಂಪನ

ಪ್ಯಾರಿಸ್: ಫ್ರಾನ್ಸ್‌ನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಅತ್ಯಂತ ಪ್ರಬಲ ಕಂಪನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಂಚ್ ಸೆಂಟ್ರಲ್ ಸೀಸ್ಮಾಲಾಜಿಕಲ್ ಬ್ಯೂರೋ (ಎಫ್‌ಸಿಎಸ್‌ಬಿ) ಪ್ರಕಾರ, ಶುಕ್ರವಾರ ಸಂಜೆ 6.38 ಗಂಟೆಗೆ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ನಿಯೋರ್ಟ್ ನಗರದ ನೈಋತ್ಯಕ್ಕೆ 28 ಕಿಮೀ ದೂರದಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ.

ಮೆಟ್ರೋಪಾಲಿಟನ್ ನಗರವಾದ ಫ್ರಾನ್ಸ್‌ನಲ್ಲಿ ದಾಖಲಾದ ಪ್ರಬಲ ಭೂಕಂಪಗಳಲ್ಲಿ ಇದು ಒಂದಾಗಿದೆ. ಇದರಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ಅವರು ಹೇಳಿದರು.

ಭೂಮಿ ನಡುಗಿದ್ದರಿಂದ ಕಟ್ಟಡಗಳಲ್ಲಿ ಬಿರುಕು ಉಂಟಾಗಿವೆ. ಹಲವಾರು ವಸ್ತುಗಳು ಹಾನಿಗೊಳಗಾಗಿವೆ. ಸದ್ಯಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. ಪ್ರಸ್ತುತ 1,100 ಮನೆಗಳು ವಿದ್ಯುತ್ ಸಂಪರ್ಕ ಕಡಿದುಕೊಂಡಿವೆ. ವೋಲ್ಟೇಜ್ ಲೈನ್ ಹಾನಿಗೀಡಾಗಿದೆ. ಹೀಗಾಗಿ ಹಲವು ಮನೆಗಳು ಕಾರ್ಗತ್ತಲಿಗೆ ಒಳಗಾಗಿವೆ ಎಂದು ತಿಳಿಸಿದ್ದಾರೆ.