Wednesday, 14th May 2025

ಅರ್ಜೆಂಟೀನಾ ಮಾಜಿ ಅಧ್ಯಕ್ಷ ಕಾರ್ಲೋಸ್‌ ಮೆನೆಮ್‌ ಇನ್ನಿಲ್ಲ

ಅರ್ಜೆಂಟೀನಾ: ಅರ್ಜೆಂಟೀನಾ ದೇಶದ ಮಾಜಿ ಅಧ್ಯಕ್ಷ ಕಾರ್ಲೋಸ್‌ ಮೆನೆಮ್‌ ವಯೋಸಹಜ ಅನಾರೋಗ್ಯದಿಂದ ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾದರು.

ದೇಶದ ಅಧ್ಯಕ್ಷ ಹುದ್ದೆಗೆ ಸ್ಫರ್ಧಿಸಲು ತನ್ನ ಮೂಲ ಧರ್ಮ ಇಸ್ಲಾಂನಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಮಾಜಿ ಅಧ್ಯಕ್ಷ ಮೆನೆಮ್‌, 1989 ರಲ್ಲಿ ಅಧ್ಯಕ್ಷ ಹುದ್ದೆಗೆ ಏರಿದರು. ಈ ವೇಳೆ ಅಧ್ಯಕ್ಷರಾಗಿದ್ದ ರಾವುಲ್‌ ಅಲ್ಫೋನ್ಸಿನ್‌ ದೇಶದಲ್ಲಿ ಹಣದುಬ್ಬರ ದಿಂದ ಆರ್ಥಿಕ ಬಿಕ್ಕಟ್ಟು ಎದುರಾದ ಕಾರಣ ರಾಜೀನಾಮೆ ನೀಡಬೇಕಾಗಿತ್ತು. ಈ ಕ್ಷಿಷ್ಟ ಪರಿಸ್ಥಿಯಲ್ಲಿ ಮೆನೆಮ್‌ ಕೆಲವೊಂದು ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1999 ರಲ್ಲಿ ಅಧಿಕಾರದಿಂದ ಕೆಳಗಿಳಿದ ಮೆನೆಮ್‌, ಮಗದೊಮ್ಮೆ 2003 ರಲ್ಲಿ ಅಧ್ಯಕ್ಷ ಹುದ್ದೆಗೆ ಸ್ಫರ್ಧಿಸಿ ವಿಜಯಿಯಾದರು.

ಸೆನೆಟರ್‌ ಹುದ್ದೆ ಅಲಂಕರಿಸುವ ಮೂಲಕ ಮೆನೆಮ್‌ ಅವರು, 2005 ರಿಂದ 2019 ರವರೆಗೂ ರಾಜಕೀಯದಲ್ಲಿ ಸಕ್ರಿಯವಾ ಗಿದ್ದರು.

Leave a Reply

Your email address will not be published. Required fields are marked *