Thursday, 15th May 2025

ಸ್ಯಾಂಡ್‌ ವಿಚ್ ದ್ವೀಪಗಳ ಬಳಿ 6.2 ತೀವ್ರತೆ ಭೂಕಂಪ

ಜಾರ್ಜಿಯಾದಕ್ಷಿಣ ಜಾರ್ಜಿಯಾದ ಕಿಂಗ್ ಎಡ್ವರ್ಡ್ ಪಾಯಿಂಟ್ ಮತ್ತು ದಕ್ಷಿಣ ಸ್ಯಾಂಡ್‌ ವಿಚ್ ದ್ವೀಪಗಳ ಬಳಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ʻದಕ್ಷಿಣ ಜಾರ್ಜಿಯಾದ ಕಿಂಗ್ ಎಡ್ವರ್ಡ್ ಪಾಯಿಂಟ್ ಮತ್ತು ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳ ಬಳಿ (IST) 6.2 ತೀವ್ರತೆಯ ಭೂಕಂಪ 139 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆʼ ಎಂದು ಮಾಹಿತಿ ನೀಡಿದೆ.

ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳು (SGSSI) ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿರುವ ಬ್ರಿಟಿಷ್ ಸಾಗ ರೋತ್ತರ ಪ್ರದೇಶವಾಗಿದೆ. ಇದು ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳು ಎಂದು ಕರೆಯಲ್ಪಡುವ ಸಣ್ಣ ದ್ವೀಪಗಳ ಸರಪಳಿಯನ್ನು ಒಳಗೊಂಡಿರುವ ದೂರದ ದ್ವೀಪಗಳ ಸಂಗ್ರಹವಾಗಿದೆ.