Wednesday, 14th May 2025

ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಹಿರಿಯ ಉಪಾಧ್ಯಕ್ಷೆ ಡಾ.ಶಿರೀನ್ ಮಜಾರಿ ಬಂಧನ

ಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರ ಮೇಲೆ ಪೊಲೀಸ್ ದಬ್ಬಾಳಿಕೆ ಮುಂದುವರಿದಿದ್ದು, ಪಕ್ಷದ ಹಿರಿಯ ಉಪಾಧ್ಯಕ್ಷೆ ಡಾ. ಶಿರೀನ್ ಮಜಾರಿ ಅವರನ್ನು ಫೆಡರಲ್ ರಾಜಧಾನಿಯ ನಿವಾಸದಿಂದ ಬಂಧಿಸಲಾಗಿದೆ.

ಇಮ್ರಾನ್ ಖಾನ್, ಅಸದ್ ಉಮರ್, ಫವಾದ್ ಚೌಧರಿ, ಶಾ ಮೆಹಮೂದ್ ಖುರೇಷಿ, ಅಲಿ ಮೊಹಮ್ಮದ್ ಖಾನ್ ಮತ್ತು ಸೆನೆಟರ್ ಎಜಾಜ್ ಚೌಧರಿ ಸೇರಿದಂತೆ ಅನೇಕ ಪಿಟಿಐ ನಾಯಕರ ಸರಣಿ ಬಂಧನದ ನಂತರ ಶಿರೀನ್ ಮಜಾರಿಯ ಬಂಧನವಾಗಿದೆ.

ಅಸಾದ್ ಉಮರ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ನಿಂದ, ಫವಾದ್ ಚೌಧರಿ ಅವರನ್ನು ಸುಪ್ರೀಂ ಕೋರ್ಟ್ ಆವರಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಶಾ ಮೆಹ ಮೂದ್ ಖುರೇಷಿಯನ್ನು ಇಸ್ಲಾಮಾಬಾದ್‌ನ ಗಿಲ್ಗಿಟ್ ಬಾಲ್ಟಿಸ್ತಾನ್ ಹೌಸ್‌ನಿಂದ ಬಂಧಿಸಲಾಗಿದೆ.

ಪಿಟಿಐಗೆ ಪ್ರಮುಖ ಕಾನೂನು ಜಯದಲ್ಲಿ, ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಅಧ್ಯಕ್ಷ ಇಮ್ರಾನ್ ಖಾನ್ ಬಂಧನವನ್ನು ಮೇ 11ರಂದು ಸುಪ್ರೀಂ ಕೋರ್ಟ್ ‘ಅಕ್ರಮ’ ಎಂದು ಘೋಷಿಸಿದೆ.