Monday, 12th May 2025

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಂಧನ

ನ್ಯೂಯಾರ್ಕ್: ಲೈಂಗಿಕ ಹಗರಣ ಮುಚ್ಚಿಡಲು ಪೋರ್ನ್ ಸ್ಟಾರ್ಗೆ ಹಣ ನೀಡಿದ್ದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (76) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಟ್ರಂಪ್ ಮ್ಯಾನ್ಹಾಟನ್ ಕೋರ್ಟ್ಗೆ ಶರಣಾಗಿದ್ದರು.

ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್‌ ಆರೋಪ ಪ್ರಕರಣದ ವಿಚಾರಣೆ ಎದುರಿಸಿದ ಹಾಗೂ ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್‌ ಆಗಿದ್ದಾರೆ.
ಬಂಧನದ ಹಿನ್ನಲೆ ನ್ಯೂಯಾರ್ಕ್‌‌ನಲ್ಲಿ ಗಲಭೆ ನಡೆಯಬಹುದು ಎಂಬ ಅನುಮಾನದ ಮೇರೆಗೆ ಹೈ ಅಲರ್ಟ್ ಘೋಷಿಸಲಾಗಿದೆ.