Tuesday, 13th May 2025

ಲಾಹೋರ್ʼನಲ್ಲಿ ಹತ್ತು ಸಿಲಿಂಡರ್‌ ಸ್ಫೋಟ: ಮೂವರ ಸಾವು, ಹತ್ತು ಮಂದಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಲಾಹೋರ್ʼನ ಬರ್ಕತ್ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅನೇಕ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿವೆ.

ಜನನಿಬಿಢ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ 10 ಅನಿಲ ಸಿಲಿಂಡರ್ʼಗಳು ಒಂದರ ನಂತರ ಒಂದರಂತೆ ಸ್ಫೋಟಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಹಲವಾರು ವಾಹನಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿವೆ.

ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಗಾಯಗೊಂಡವರನ್ನ ಚಿಕಿತ್ಸೆಗಾಗಿ ಶೇಖ್ ಜಾಯೆದ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾದ ಘಟನೆಯ ವೀಡಿಯೋದಲ್ಲಿ, ಸಿಲೆಂಡರ್‌ ಸ್ಫೋಟ ಸೆರೆಯಾಗಿದೆ.

ಕಳೆದ ವಾರ ಭಯೋತ್ಪಾದಕ ಹಫೀಜ್ ಸಯೀದ್ʼನ ಜೋಹರ್ ಟೌನ್ ನಿವಾಸದ ಬಳಿ ಸ್ಫೋಟದ ಹಿನ್ನೆಲೆಯಲ್ಲಿ ಈ ಸ್ಫೋಟ ಸಂಭವಿಸಿವೆ ಎನ್ನಲಾಗುತ್ತಿದೆ. ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಇತರ 20 ಜನರು ಗಾಯಗೊಂಡಿದ್ದರು.

Leave a Reply

Your email address will not be published. Required fields are marked *