Monday, 12th May 2025

ಈ ದೇಶದಲ್ಲಿ ಕೈನ ಮಧ್ಯ ಬೆರಳು ತೋರಿಸುವುದು ಅಸಭ್ಯ ವರ್ತನೆಯಲ್ಲ..!

ವಾಷಿಂಗ್ಟನ್: ಈ ದೇಶದಲ್ಲಿ ನಮ್ಮ ಕೈನ ಮಧ್ಯ ಬೆರಳು ತೋರಿಸುವುದು ಅಸಭ್ಯ ವರ್ತನೆ ‘ದೇವರು ಕೊಟ್ಟ ಹಕ್ಕು’ ಎಂದು ಪರಿಗಣಿಸಲಾಗಿದೆ.

ಕೆನಡಾದ ಸಂವಿಧಾನದಲ್ಲಿ ಮಧ್ಯದ ಬೆರಳನ್ನು ತೋರುವುದು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎಂದು ರಕ್ಷಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಈ ಮೂಲಕ 26 ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶರು ತನ್ನ ನೆರೆಹೊರೆಯವರಿಗೆ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ವಜಾ ಗೊಳಿಸಿದರು. ಯಾರಿಗಾದರೂ ಬೆರಳನ್ನು ತೋರುವುದು ಅಪರಾಧವಲ್ಲ. ಇದು ಕೆನಡಿಯನ್‌ಗೆ ಸೇರಿರುವ ಹಕ್ಕು ಎಂದು ಅವರು ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್ ಅನ್ನು ಉಲ್ಲೇಖಿಸಲಾಗಿದೆ.

ಶಿಕ್ಷಕ ಹಾಗೂ ಇಬ್ಬರು ಮಕ್ಕಳ ತಂದೆಯಾಗಿರುವ ಆರೋಪಿ ನೀಲ್ ಎಪ್ಸ್ಟೀನ್ ತನ್ನ ನೆರೆಹೊರೆಯವರ ವಿರುದ್ಧ ಕೊಲೆ ಬೆದರಿಕೆ ಮತ್ತು ಕ್ರಿಮಿನಲ್ ಕಿರುಕುಳವನ್ನು ನೀಡಿದ್ದಕ್ಕಾಗಿ 2021 ರ ಮೇ ತಿಂಗಳಲ್ಲಿ ಪೊಲೀಸರು ಬಂಧಿಸಿ ದ್ದರು.

ʻಮಧ್ಯ ಬೆರಳು ತೋರಿಸುವುದು ಸಭ್ಯವಾಗಿರದಿರಬಹುದು. ಅದು ಸಜ್ಜನಿಕೆಯಲ್ಲದಿರಬಹುದು. ಅದೇನೇ ಇದ್ದರೂ, ಇದು ಕ್ರಿಮಿನಲ್ ಹೊಣೆಗಾರಿಕೆ ಯನ್ನು ಪ್ರಚೋದಿಸುವುದಿಲ್ಲʼ ಎಂದು ಗಲಿಯಾಟ್ಸಾಟೋಸ್ ತೀರ್ಪು ನೀಡಿದರು.