Wednesday, 14th May 2025

ಗೊಟಬಯ ರಾಜಪಕ್ಸ ಸಹೋದರ ಬಾಸಿಲ್ ಸಂಸತ್ ಸ್ಥಾನಕ್ಕೆ ರಾಜೀನಾಮೆ

ಕೊಲಂಬೊ: ಶ್ರೀಲಂಕಾದ ಮಾಜಿ ಹಣಕಾಸು ಸಚಿವ, ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸಹೋದರ ಬಾಸಿಲ್ ರಾಜಪಕ್ಸ ಅವರು ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶ್ರೀಲಂಕಾದ ಮಹಾ ಆರ್ಥಿಕ ಬಿಕ್ಕಟ್ಟಿನ ನಂತರ ಪ್ರಭಾವಿ ರಾಜಕೀಯ ಮನೆತನದ ಎರಡನೇ ನಾಯಕರು ಈ ನಿರ್ಧಾರ ಕೈಗೊಂಡಿ ದ್ದಾರೆ.

ಇಂದಿನಿಂದ ಸರ್ಕಾರದ ಯಾವುದೇ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವುದಿಲ್ಲ. ಆದರೆ, ರಾಜಕೀಯದಿಂದ ನಿರ್ಗಮಿಸುವು ದಿಲ್ಲ’ ಎಂದು ಬಾಸಿಲ್ ರಾಜಪಕ್ಸ ತಿಳಿಸಿದ್ದಾರೆ.

ಗೊಟಬಯ ರಾಜಪಕ್ಸ ಅವರ ಹಿರಿಯ ಸಹೋದರ ಮಹಿಂದಾ ರಾಜಪಕ್ಸ ಅವರು ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭೂಗತರಾಗಿದ್ದರು. ಆದರೆ, ಮಹಿಂದಾ ಅವರು ಇನ್ನೂ ಕೂಡ ಸಂಸತ್‌ ಸದಸ್ಯ ರಾಗಿ ಉಳಿದುಕೊಂಡಿದ್ದಾರೆ.