ನ್ಯೂಝಿಲ್ಯಾಂಡ್ ಸಂಸತ್‌ನಲ್ಲಿ ಮಂಗಳವಾರ ಮಸೂದೆಯೊಂದನ್ನು ಅಂಗೀಕರಿಸ ಲಾಗಿದೆ. ಇದರಿಂದಾಗಿ ಇನ್ನು ಮುಂದೆ ಆ ದೇಶದಲ್ಲಿ 14 ವರ್ಷಕ್ಕಿಂತ ಕೆಳವಯಸ್ಸಿನ ವರೆಲ್ಲರೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳನ್ನು ಖರೀದಿಸುವುದು ಕಾನೂನು ಬಾಹಿರವಾಗಲಿದೆ.
ಈ ಮಸೂದೆಯು ಧೂಮಪಾನ ಸೇವನೆಗೆ ಇರುವ ಕನಿಷ್ಠ ವಯೋಮಿತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಹೋಗು ತ್ತದೆ.
ನೂತನ ಮಸೂದೆಯು ಧೂಮಪಾನ ಮುಕ್ತ ಭವಿಷ್ಯದೆಡೆಗೆ ಒಂದು ಹೆಜ್ಜೆಯಾಗಿದೆ” ಎಂದು ಸಂಪುಟ ಸಚಿವೆ ಆಯೇಶಾ ವೆರ್ರಾಲ್ ತಿಳಿಸಿದ್ದಾರೆ.
ನೂತನ ಮಸೂದೆಯ ಜಾರಿಯಿಂದಾಗಿ ಸಾವಿರಾರು ವ್ಯಕ್ತಿಗಳು ಸುದೀರ್ಘ, ಆರೋಗ್ಯಕರ ಬದುಕನ್ನು ಸಾಗಿಸಲಿದ್ದಾರೆ. ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವ್ವವಾಯು, ಆಂಗವೈಕಲ್ಯ ಮತ್ತಿತರ ಅನಾರೋಗ್ಯಗಳಿಗೆ ವ್ಯಯಿಸುವ ವೆಚ್ಚವು ಕಡಿಮೆಯಾಗಿ ಆರೋಗ್ಯ ಪಾಲನಾ ವ್ಯವಸ್ಥೆಗೆ 3.2 ಶತಕೋಟಿ ಡಾಲರ್ ಉಳಿತಾಯವಾಗಲಿದೆ’ ಎಂದು ಆಯೆಶಾ ವೆರ್ರಾಲ್ ತಿಳಿಸಿದ್ದಾರೆ.
ನ್ಯೂಝಿಲ್ಯಾಂಡ್‌ನಲ್ಲಿ ಒಟ್ಟು ಜನಸಂಖ್ಯೆಯ ಕೇವಲ 8 ಶೇಕಡ ಮಂದಿ ಮಾತ್ರವೇ ಧೂಮಪಾನಿಗಳೆಂದು ಅಂದಾಜಿಸಲಾಗಿದೆ.