Sunday, 11th May 2025

ಭ್ರಷ್ಟಾಚಾರ ಸಾಬೀತು: ಸೂಕಿಗೆ ಆರು ವರ್ಷ ಜೈಲು ಶಿಕ್ಷೆ

ಮ್ಯಾನ್ಮಾರ್‌: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಗೆ ಮ್ಯಾನ್ಮಾರ್ ನ ನ್ಯಾಯಾಲಯವು ಸೋಮ ವಾರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

77 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ವಿರೋಧಿಸಿದ ಫಿಗರ್ ಹೆಡ್ ಅವರ ವಿರುದ್ಧ ಭ್ರಷ್ಟಾಚಾರದಿಂದ ಹಿಡಿದು ಚುನಾವಣಾ ಉಲ್ಲಂಘನೆಯವರೆಗೆ ಕನಿಷ್ಠ 18 ಅಪರಾಧಗಳ ಆರೋಪ ಹೊರಿಸಲಾಗಿದೆ.

ಸೂಕಿ ಆರೋಪಗಳನ್ನು ಅಸಂಬದ್ಧ ಎಂದು ಕರೆದಿದ್ದರು ಮತ್ತು ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.

ಆರೋಗ್ಯ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಅವರು ಸ್ಥಾಪಿಸಿದ ದಾವ್ ಖಿನ್ ಕಿ ಫೌಂಡೇ ಶನ್ನ ಹಣವನ್ನು ಮನೆ ನಿರ್ಮಿಸಲು ಮತ್ತು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆಗೆ ನೀಡಿದ್ದಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.