Wednesday, 14th May 2025

ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವಲ್ಲಿ ಅಧ್ಯಕ್ಷ ಬೈಡನ್‌ ಯಶಸ್ವಿ

ವಾಷಿಂಗ್ಟನ್‌: ಸುಮಾರು 1.9 ಟ್ರಿಲಿಯನ್‌ ಡಾಲರ್‌ ಮೊತ್ತದ ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅಮೆರಿಕದ ಸಂಸತ್‌ ಅನುಮೋದನೆ ನೀಡಿದೆ. 219-212 ಮತಗಳಿಂದ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವ ಮೂಲಕ ಅಧ್ಯಕ್ಷ ಜೋ ಬೈಡನ್‌ ಗೆಲುವು ಕಂಡುಕೊಂಡರು.

ಪ್ಯಾಕೇಜ್‌ ಬಹಳ ವೆಚ್ಚದಾಯಕವಾಗಿದೆ. ಶಿಕ್ಷಣಕ್ಕೆ ಕಡಿಮೆ ಅನುದಾನ ಸಿಗಲಿದೆ. ಡೆಮಾಕ್ರಟಿಕ್‌ ಸಂಸದರ ಕ್ಷೇತ್ರಗಳಿಗೆ ಉದಾರವಾಗಿ ಅನುದಾನ ನೀಡುವ ಉದ್ದೇಶದಿಂದ ಪ್ಯಾಕೇಜ್‌ ರೂಪಿಸಲಾಗಿದೆ’ ಎಂದು ರಿಪಬ್ಲಿಕನ್‌ ಪಕ್ಷದ ಕೆಲವು ಸಂಸದರು ಟೀಕಿಸಿದ್ದಾರೆ.

ಕನಿಷ್ಠ ವೇತನ ಹೆಚ್ಚಳ ಅಂಶವನ್ನು ಈ ಪ್ಯಾಕೇಜ್‌ನಿಂದ ಕೈಬಿಡಬೇಕು ಎಂಬ ಬೇಡಿಕೆಗೆ ಮಣಿದ ಸಂಸತ್‌, ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಆದರೆ, ರಾಜ್ಯಗಳಿಗೆ ಅನುದಾನ ಹಂಚಿಕೆ ಹಾಗೂ ಇತರ ವಿಷಯಗಳು ಮುನ್ನೆಲೆಗೆ ಬಂದಾಗ ಡೆಮಾ ಕ್ರಟಿಕ್‌ ಪಕ್ಷದ ಸಂಸದರು ತಮ್ಮ ಬಲ ಪ್ರದರ್ಶಿಸುವ ಸಾಧ್ಯತೆ ಇದೆ.

 

Leave a Reply

Your email address will not be published. Required fields are marked *