Thursday, 15th May 2025

ರಷ್ಯಾ ದಾಳಿ: ಮತ್ತೋರ್ವ ಭಾರತೀಯನ ಸಾವು

ಉಕ್ರೇನ್: ಯುದ್ದಪೀಡಿತ ಉಕ್ರೇನ್ʼನಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪಂಜಾಬ್‌ ಮೂಲದ ಯುವಕ ಚಂದನ್ ಬುಧವಾರ ಪಾರ್ಶ್ವ ವಾಯುನಿಂದ ಮೃತ ಪಟ್ಟಿದ್ದಾನೆ.

ಚಂದನ್ ಜಿಂದಾಲ್ (22) ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೊವ್, ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾ ಉಕ್ರೇನ್ʼನಲ್ಲಿ ಅಧ್ಯಯನ ಮಾಡುತ್ತಿದ್ದರು. ಆತ ಅನಾರೋಗ್ಯಕ್ಕೆ ಒಳಗಾಗಿದ್ದು, ವಿನ್ನಿಟ್ಸಿಯಾದ ತುರ್ತು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮೆದುಳಿನಲ್ಲಿ ಇಸ್ಚೆಮಿಯಾ ಸ್ಟ್ರೋಕ್ʼನಿಂದ ಬಳಲುತ್ತಿದ್ದ ಅವರನ್ನ ಐಸಿಯುಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಅಂತಿಮ ಸಂಸ್ಕಾರಕ್ಕಾಗಿ ಮಗನ ಮೃತದೇಹವನ್ನ ತರಿಸಿ ಕೊಡುವಂತೆ ಮೃತ ಚಂದನ್‌ ತಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.