Thursday, 15th May 2025

ಸುಂಟರಗಾಳಿಯ ಅಬ್ಬರ: ಮೃತರ ಸಂಖ್ಯೆ ೮೦

USA

ವಾಷಿಂಗ್ಟನ್: ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳಲ್ಲಿ ಇದು ವರೆಗೂ 80 ಜನರು ಮೃತಪಟ್ಟಿದ್ದಾರೆ.

“ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ” ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ರಾಜ್ಯಗಳಲ್ಲಿ ಶನಿವಾರ ಸುಂಟರಗಾಳಿಯು ಭಾರೀ ಹಾನಿ ಮಾಡಿದೆ. ಕೆಂಟುಕಿಯಲ್ಲಿಯೇ ಸುಮಾರು 50 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಗಾಳಿಯ ಅಬ್ಬರಕ್ಕೆ ಮೇಣದ ಬತ್ತಿ ತಯಾ ರಿಕಾ ಕಾರ್ಖನೆ ಸಂಪೂರ್ಣ ನಾಶಗೊಂಡಿದೆ.

ಸುಂಟರಗಾಳಿ ಬೀಸುವಾಗ ಕಾರ್ಖನೆಯಲ್ಲಿ 110 ಜನರು ಕೆಲಸ ಮಾಡುತ್ತಿದ್ದರು. ಗಾಳಿಯ ತೀವ್ರತೆಗೆ ಕಾರ್ಖನೆ ಮೇಲ್ಛಾವಣಿ ಕುಸಿದಿದೆ. 40 ಜನರನ್ನು ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಲಾಗಿದೆ.

ಮೇಣದ ಬತ್ತಿ ಕಾರ್ಖನೆಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ನಮ್ಮನ್ನು ರಕ್ಷಣೆ ಮಾಡಿ. ನಮ್ಮ ಸಹೋದ್ಯೋಗಿಗಳು ಸಹ ಇಲ್ಲಿ ಸಿಲುಕಿದ್ದಾರೆ” ಎಂದು ಕಾರ್ಖನೆ ಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಪರಿಚಯಸ್ಥರಿಗೆ ಆಡಿಯೋ ಸಂದೇಶ ಕಳಿಸಿದ್ದಾರೆ.

ಸುಂಟರಗಾಳಿಯ ಅಬ್ಬರದಿಂದ ಹಾನಿಯಾದ ಹಿನ್ನಲೆಯಲ್ಲಿ ಕೆಂಟುಕಿ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ಗವರ್ನರ್ ಆಂಡಿ ಬೆಶಿಯರ್ ಆದೇಶ ಹೊರಡಿಸಿದ್ದಾರೆ.

ಇಲಿನಾಯನ್ಸ್‌ನಲ್ಲಿರುವ ಅಮೆಝಾನ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 6 ಜನರು ಮೃತಪಟ್ಟಿದ್ದಾರೆ. ಕ್ರಿಸ್‌ಮಸ್ ಹಿನ್ನಲೆ ಯಲ್ಲಿ ಹೆಚ್ಚಿನ ಆರ್ಡರ್‌ಗಳಿದ್ದ ಕಾರಣ ರಾತ್ರಿ ಪಾಳಿಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೀಸಿದ ಸುಂಟರಗಾಳಿ ಅನಾಹುತ ಸೃಷ್ಟಿಸಿದೆ.

ಕೆಲವು ಪ್ರದೇಶಗಳಲ್ಲಿ ಚರ್ಚ್‌ಗೆ ಹಾನಿಯಾಗಿದೆ. ಹಲವಾರು ಕಡೆ ನೀರಿನ ಸಂಪರ್ಕ ಸ್ಥಗಿತಗೊಂಡಿದೆ. ವಿದ್ಯುತ್ ವಿತರಣಾ ವ್ಯವಸ್ಥೆಗೆ ಹಾನಿಯಾಗಿದೆ.

ಅರ್ಕಾನ್ಸಾಸ್ ಪ್ರದೇಶದಲ್ಲಿ ಮೊನೆಟ್ ನರ್ಸಿಂಗ್ ಹೋಂಗೆ ಸುಂಟರಗಾಳಿ ಹಾನಿ ಮಾಡಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ರೆಡ್ ಕ್ರಾಸ್ ಘಟಕ ಸುಂಟರಗಾಳಿ ಪ್ರಭಾವಕ್ಕೆ ಸಿಲುಕಿದ 5 ರಾಜ್ಯಗಳಲ್ಲಿಯೂ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.