Monday, 12th May 2025

ಭೀಕರ ಆಟೋ ಅಪಘಾತ: 5 ಭಾರತೀಯ ವಿದ್ಯಾರ್ಥಿಗಳ ಸಾವು

ಟೊರೊಂಟೊ: ಕೆನಡಾದಲ್ಲಿ ಸಂಭವಿಸಿದ ಭೀಕರ ಆಟೋ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.

ಕೆನಡಾದ ಟೊರೊಂಟೊ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ಕೆನಡಾದ ಭಾರತದ ಹೈ ಕಮಿಷನರ್ ಅಜಯ್ ಬಿಸಾರಿಯಾ ಟ್ವೀಟ್‌ ಮಾಡಿದ್ದಾರೆ.

ಕೆನಡಾದಲ್ಲಿ ಹೃದಯ ವಿದ್ರಾವಕ ದುರಂತ ಸಂಭವಿಸಿದೆ. ಸಂತ್ರಸ್ತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತೇನೆ. ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳ ಸ್ನೇಹಿತ ರೊಂದಿಗೆ ಕೆನಡಾದ ಭಾರತದ ಹೈ ಕಮಿಷನ್ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್‌ಪಾಲ್ ಸಿಂಗ್, ಮೋಹಿತ್ ಚೌಹಾನ್ ಮತ್ತು ಪವನ್ ಕುಮಾರ್ ಮೃತಪಟ್ಟ ವಿದ್ಯಾರ್ಥಿಗಳು ಎಂದು ಕೆನಡಾ ಪೊಲೀಸರು ಮಾಹಿತಿ ನೀಡಿದ್ದಾರೆ.