Tuesday, 13th May 2025

ಹೆಲಿಕಾಪ್ಟರ್‌ ಪತನ: ಪೈಲಟ್ ಸೇರಿ ಐದು ಮಂದಿ ಸಾವು

ಅಂಕರೇಜ್: ಅಲಾಸ್ಕದಲ್ಲಿ ಹೆಲಿಕಾಪ್ಟರ್‌ ಪತನವಾಗಿದ್ದು, ಪೈಲಟ್‌ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಜೆಕ್‌ ರಿಪಬ್ಲಿಕ್‌ನ ಶ್ರೀಮಂತ ವ್ಯಕ್ತಿಯೂ ಸೇರಿದ್ದಾರೆ. ಅಪಘಾತದಲ್ಲಿ ಬದುಳಿದಿರುವ ಏಕೈಕ ವ್ತಕ್ತಿಯನ್ನು ಅಂಕರೇಜ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮೂವರು ಪ್ರವಾಸಿಗರು ಹಾಗೂ ಇಬ್ಬರು ಗೈಡ್‌ಗಳನ್ನು ಹೊತ್ತ ಹೆಲಿಕಾಪ್ಟರ್‌ ಟೋರ್ಡ್ರಿಲ್ಲೊ ಮೌಂಟೇನ್‌ ಲಾಜ್‌ನಿಂದ ಶನಿವಾರ ಪ್ರಯಾಣ ಬೆಳೆಸಿತ್ತು. ಕೆಲವೇ ಹೊತ್ತಿನ ನಂತರ ಈ ಅಪಘಾತ ಸಂಭವಿಸಿತು ಎಂದು ಮೂಲಗಳು ಹೇಳಿವೆ.

ಮೃತರಾದ ಜೆಕ್‌ ಪ್ರಜೆ, ಪೀಟರ್‌ ಕೆಲ್ನರ್ ಶ್ರೀಮಂತ ಉದ್ಯಮಿ. ಅವರ ಆಸ್ತಿ ಮೌಲ್ಯ 17 ಶತಕೋಟಿ ಡಾಲರ್‌ ಇದ್ದು, ಫೋಬ್ಸ್‌ ಸಿದ್ಧಪಡಿಸಿದ್ದ 2020ನೇ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ ಇವರ ಹೆಸರಿತ್ತು.

Leave a Reply

Your email address will not be published. Required fields are marked *