Wednesday, 14th May 2025

ರೈಲು ಅಪಘಾತ: 40 ಪ್ರಯಾಣಿಕರ ಸಾವು

ಟೆಕ್ಸಾಸ್ : ಅಮೆರಿಕದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 40 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಮಿಸೌರಿಯ ಮೆಂಡನ್ ನಲ್ಲಿ ಸೋಮವಾರ ಅಮ್ಟ್ರಾಕ್ ರೈಲು ಡಂಪ್ ಟ್ರಕ್ ಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಪರಿಣಾಮ 40 ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಸ್ ಏಂಜಲೀಸ್ನಿಂದ ಚಿಕಾಗೋಗೆ 243 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಟ್ರೈನ್ ಅಪಘಾತ ಸಂಭವಿಸಿದೆ ಎಂದು ಅಮ್ಟ್ರಾಕ್ ಹೇಳಿಕೆಯಲ್ಲಿ ತಿಳಿಸಿದೆ. ಮೆಂಡನ್ ಕಾನ್ಸಾಸ್ ನಗರದಿಂದ ಈಶಾನ್ಯಕ್ಕೆ ಸುಮಾರು 115 ಮೈಲಿ ದೂರದಲ್ಲಿದೆ.