Monday, 12th May 2025

ಬಸ್ ಕಂದಕಕ್ಕೆ ಉರುಳಿ 32 ಪ್ರಯಾಣಿಕರ ಸಾವು

ಲಿಮಾ: ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿ, ಘಟನೆಯಲ್ಲಿ 32 ಪ್ರಯಾಣಿಕರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಲಿಮಾದಿಂದ 60 ಕಿ.ಮೀ. ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದೆ. ಒಟ್ಟು 63 ಪ್ರಯಾಣಿಕರು ಬಸ್‌ನಲ್ಲಿದ್ದರು. ಮೃತರಲ್ಲಿ ಆರು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಸೇರಿದ್ದಾರೆ. ಚಾಲಕ ಅಮಿತ ವೇಗದಲ್ಲಿ ಬಸ್ ಚಲಾಯಿಸಿರುವುದು ಅವಘಡಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಬಸ್ 650 ಅಡಿ ಆಳದ ಕಂದಕಕ್ಕೆ ಉರುಳಿದೆ. ಕಳೆದ ಭಾನುವಾರ ಪೆರುವಿನಲ್ಲಿ ಅಮೆಜಾನ್ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿ ಹೊಡೆದು 22 ಮಂದಿ ಮೃತಪಟ್ಟಿದ್ದರು. ಎರಡು ದಿನಗಳ ಹಿಂದೆ ಪೆರುವಿನ ಆಗ್ನೇಯ ಪ್ರದೇಶದಲ್ಲಿ ಬಸ್ ಪ್ರಪಾತಕ್ಕೆ ಉರುಳಿ 17 ಮಂದಿ ಮೃತಪಟ್ಟಿದ್ದರು.

ಅಮಿತ ವೇಗ, ಕಳಪೆ ಹೆದ್ದಾರಿ ನಿರ್ವಹಣೆ, ರಸ್ತೆ ಚಿಹ್ನೆಗಳ ಅಭಾವದಿಂದಾಗಿ ಪೆರುವಿನಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.

Leave a Reply

Your email address will not be published. Required fields are marked *