ನವದೆಹಲಿ: ಹೊಸ ವರ್ಷಕ್ಕೆ ಫ್ಯಾಷನ್ ಪ್ರಿಯರಿಗೆ, ಅದರಲ್ಲೂ ಲೇಡಿಸ್‌ಗೆ ಒಗ್ಗುವಂತ ಸ್ಟೈಲಿಶ್ ಡ್ರೆಸ್‌ಗಳು (Stylish Outfit) ಮಾರುಕಟ್ಟೆಗೆ ಎಂಟ್ರಿ ನೀಡಿದ್ದು ನಾನಾ ವಿನ್ಯಾಸಗಳಲ್ಲಿ ವೈವಿಧ್ಯಮಯ ಕಾನ್ಸೆಪ್ಟ್‌ಗಳು ವಿನೂತನ ಡಿಸೈನರ್‌ವೇರ್‌ಗಳ ಆಯ್ಕೆ ಇರಲಿದೆ. ಅದರಲ್ಲೂ ಆಫೀಸ್ ಪಾರ್ಟಿಗೆ ಧರಿಸುವಂತಹ ಸ್ಕರ್ಟ್ ಬ್ಲೌಸ್, ಮ್ಯಾಕ್ಸಿ ಸ್ಕರ್ಟ್, ಸೂಟ್ ಇತ್ಯಾದಿ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿದೆ.
ಚಿಕ್ ಜಂಪ್‌ಸೂಟ್:

ಲೇಡಿಸ್ ಮಾಡರ್ನ್ ಔಟ್‌ಫಿಟ್ ಲುಕ್‌ನೊಂದಿಗೆ ಈ ಚಿಕ್ ಜಂಪ್ ಸೂಟ್ ಹೊಸ ವರ್ಷದಲ್ಲಿ ಹೊಸ ಲುಕ್ ನೀಡಲಿದೆ. ಈ ಡ್ರೆಸ್ ಮ್ಯಾಚಿಂಗ್ ಕಿವಿಯೋಲೆ ಧರಿಸಿದ್ರೆ ನಿಮ್ಮ ಲುಕ್ ಮತ್ತಷ್ಟು ಡಿಪ್ರೆಂಟ್ ಆಗಿ ಕಾಣಲಿದೆ. ಹೊಸ ವರ್ಷದಲ್ಲಿ ನ್ಯೂ ಲುಕ್ ಡಿಸೈನರ್ ವೇರ್‌ನಲ್ಲಿ ಆಫೀಸ್ ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಆಸೆ ಇದ್ದಲ್ಲಿ ಈ ಡ್ರೆಸ್ ಲೇಡಿಸ್‌ಗೆ ಪರ್ಫೆಕ್ಟ್ ಆಗಿದೆ.
ಮ್ಯಾಕ್ಸಿ ಸ್ಕರ್ಟ್ ಮತ್ತು ಬ್ಲೌಸ್ ಕಾಂಬೊ:

ಹೊಸ ವರ್ಷದ ಲುಕ್ ಇನ್ನಷ್ಟು ವಿಭಿನ್ನವಾಗಿ ಕಾಣಲು ಮ್ಯಾಕ್ಸಿ ಸ್ಕರ್ಟ್ ಬ್ಲೌಸ್ ನ್ಯೂ ಇಯರ್‌ನಲ್ಲಿ ವೆಸ್ಟರ್ನ್ ಶೈಲಿಯ ಡಿಸೈನರ್ ವೇರ್‌ಗಳು ಕಾಲಿಟ್ಟಿವೆ. ಈ ಸ್ಕರ್ಟ್, ಬ್ಲೌಸ್ ಎಲ್ಲಾ ವಯಸ್ಸಿನ ನಾರಿ ಮಣಿಯರನ್ನು ಆಕರ್ಷಿಸುತ್ತಿದ್ದು ಇದಕ್ಕೆ ತಕ್ಕನಾದ ಮ್ಯಾಚಿಂಗ್ ಚೈನ್ ಹಾಕಿದ್ರೆ ಲುಕ್ ಮತ್ತಷ್ಟು ಡಿಫರೆಂಟ್ ಆಗಿ ಕಾಣಲಿದೆ. ಆಫೀಸ್ ಫಂಕ್ಷನ್‌ಗೆ ಡಿಸೆಂಟಾಗಿ ಕಾಣಬೇಕು ಎನ್ನುವವರಿಗೆ ಮ್ಯಾಕ್ಸಿ ಸ್ಕರ್ಟ್ ಬೆಸ್ಟ್ ಚಾಯ್ಸ್.
ಪೆನ್ಸಿಲ್ ಸ್ಕರ್ಟ್ ಮತ್ತು ಬಟನ್ ಡೌನ್ ಶರ್ಟ್:

ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಪೆನ್ಸಿಲ್ ಸ್ಕರ್ಟ್ ಮತ್ತು ಶರ್ಟ್ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ಬಂದಿದ್ದು ಈ ಲುಕ್ ಲೇಡಿಸ್‌ಗೆ ಮೋಸ್ಟ್ ಲೈಕ್ ಆಗಲಿದೆ. ಮಾರ್ಡನ್ ಲುಕ್‌ನಲ್ಲಿ ಸಿಂಪಲ್ ಆಗಿ ಕಾಣುವ ಹೆಚ್ಚು ಹೆವಿ ವಿನ್ಯಾಸವಿಲ್ಲದ ಇವು ಹುಡುಗಿಯರಿಗೆ ಪ್ರಿಯವಾಗುವಂತಿವೆ.
ಟೈಲರಡ್ ಸೂಟ್:

ವೆಲ್ವೆಟ್‌ನಂತಹ ವಿಶಿಷ್ಟವಾದ ಬಣ್ಣದೊಂದಿಗೆ ಫ್ಯಾಬ್ರಿಕ್‌ನಲ್ಲಿ ವಿನ್ಯಾಸಗೊಳಿಸಲಾದ ಸೂಟ್, ಆಫೀಸ್ ವೇರ್‌ಗೆ ಬೆಸ್ಟ್ ಚಾಯ್ಸ್ ಆಫೀಸ್ ಫಂಕ್ಷನ್‌ಗೆ ಈ ಸೂಟ್ ಸಿಂಪಲ್ ಆಗಿ ಕಾಣುವ ಮೂಲಕ ಆಟ್ರಾಕ್ಟ್ ಆಗಿ ಕಾಣಲಿದೆಮ
ಬ್ಲೇಜರ್‌ನೊಂದಿಗೆ ಕಾಕ್‌ಟೈಲ್ ಡ್ರೆಸ್:

ಕಾಕ್‌ಟೈಲ್ ಡ್ರೆಸ್ ಕೂಡ ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಬ್ಲೇಜರ್‌ನೊಂದಿಗೆ ಅದಕ್ಕೆ ಹೊಂದುವಂತಹ ಕೋಟ್ ಸ್ಟೈಲಿಸ್ ಲುಕ್ ನೀಡಲಿದೆ. ವೈಟ್ ಮತ್ತು ಕ್ಲಾಸಿಕ್ ಬಣ್ಣಗಳಲ್ಲಿ ಡ್ರೆಫರೆಂಟ್ ಲುಕ್ ಕೊಡಲಿದೆ. ಅದರಲ್ಲೂ ಕೊಂಚ ಮಾಡರ್ನ್ ಲುಕ್‌ನಲ್ಲಿರುವವರಿಗೆ ಈ ಡ್ರೆಸ್ ಹೊಂದುತ್ತವೆ.
ಈ ಸುದ್ದಿಯನ್ನೂ ಓದಿ:Heavy Snowfall: ಭಾರೀ ಹಿಮಪಾತ; 5,000 ಪ್ರವಾಸಿಗರ ರಕ್ಷಣೆ