ಶಕ್ತಿಯುತ 50ಎಂಪಿ ರಿಯರ್ ಕ್ಯಾಮರಾ ಮತ್ತು 8ಎಂಪಿ ಫ್ರಂಟ್ ಕ್ಯಾಮರಾದಿಂದ ಸನ್ನದ್ಧವಾಗಿದ್ದು ಬಳಕೆದಾರರಿಗೆ ಆಕರ್ಷಕ ಫೋಟೋಗಳು ಮತ್ತು ಸೆಲ್ಫೀಗಳನ್ನು ಸುಲಭವಾಗಿ ಸೆರೆ ಹಿಡಿಯಲು ಅವಕಾಶ ಕಲ್ಪಿಸುತ್ತದೆ.
• ಗ್ಲಾಸಿ ವೈಟ್, ಗ್ಲಾಸಿ ಪರ್ಪಲ್ ಮತ್ತು ಗ್ಲಾಸಿ ಬ್ಲಾಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯ
• ಯೂನಿಸೊಕ್ 1606 ಚಿಪ್ ಸೆಟ್ ಹೊಂದಿರುವ ಎಲ್ಲ ಅಪ್ಲಿಕೇಷನ್ ಗಳಲ್ಲೂ ಸದೃಢ ಕಾರ್ಯಕ್ಷಮತೆ ನೀಡುತ್ತದೆ
• ಯುವ 4, 16.55 ಸೆಂ.ಮೀ. (6.56”) ಎಚ್.ಡಿ.+ ಪಂಚ್ ಹೋಲ್ ಡಿಸ್ಪ್ಲೇಯನ್ನು 90 ಹರ್ಟ್ಸ್ ರಿಫ್ರೆಶ್ ರೇಟಿನಲ್ಲಿ ನೀಡುತ್ತಿದ್ದು ಉಜ್ವಲ ಮತ್ತು ದ್ರವೀಕೃತ ವೀಕ್ಷಣೆಯ ಅನುಭವ ನೀಡುತ್ತದೆ
• ನಿಶ್ಚಿತ ಆಂಡ್ರಾಯಿಡ್ ಅಪ್ ಗ್ರೇಡ್ ಮತ್ತು ಸೆಕ್ಯುರಿಟಿ ಅಪ್ಡೇಟ್ ಗಳು
• ಅಸಾಧಾರಣ ಮಾರಾಟ ನಂತರದ ಬೆಂಬಲ ನೀಡುತ್ತಿದ್ದು 1 ವರ್ಷ ವಾರೆಂಟಿ ಮತ್ತು ಮನೆಯಲ್ಲಿ ಉಚಿತ ಸೇವೆ
ಬೆಂಗಳೂರು: ಮುಂಚೂಣಿಯ ಸ್ಮಾರ್ಟ್ ಫೋನ್ ಉತ್ಪಾದಕ ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ಬೆಂಗಳೂರಿನಲ್ಲಿ ಯುವ ಸರಣಿಯಲ್ಲಿ ತನ್ನ ಹೊಚ್ಚಹೊಸ ಮಾದರಿ ಯುವ 4 ಬಿಡುಗಡೆ ಮಾಡುವ ಕಾರ್ಯಕ್ರಮ ವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು.
ಮೊದಲ ಸಲ ಸ್ಮಾರ್ಟ್ ಫೋನ್ ಬಳಸುವವರ ವಿಕಾಸಗೊಳ್ಳುತ್ತಿರುವ ಅಗತ್ಯಗಳಿಗೆ ಪೂರೈಸಲು ವಿನ್ಯಾಸಗೊಳಿಸ ಲಾದ ಯುವ 4 ಶಕ್ತಿಯುತ ಕಾರ್ಯಕ್ಷಮತೆ, ಸೊಗಸಾದ ವಿನ್ಯಾಸ ಮತ್ತು ತಡೆರಹಿತ ಅನುಭವವನ್ನು ಆಕರ್ಷಕ ಪ್ರಾರಂಭಿಕ ದರ ₹6,999ದಲ್ಲಿ ನೀಡುತ್ತಿದೆ. ಹೊಸ ಯುವ 4 ಡಿಸೆಂಬರ್ ತಿಂಗಳಿಂದ ಪ್ರಾರಂಭಿಸಿ ಲಾವಾದ ರೀಟೇಲ್ ಮಳಿಗೆಗಳಲ್ಲಿ ಲಭ್ಯವಾಗುತ್ತದೆ.
ಬೆಂಗಳೂರಿನಲ್ಲಿ ಈ ಉತ್ಪನ್ನದ ವಿಶೇಷ ಬಿಡುಗಡೆಯು ಲಾವಾಗೆ ಉತ್ಸಾಹಕರ ಮೈಲಿಗಲ್ಲಿನ ಗುರುತಾಗಿದ್ದು ಅದು ತನ್ನ ರೀಟೇಲ್ ಪ್ರಥಮ ಕಾರ್ಯತಂತ್ರವನ್ನು ಮುಂದುವರಿಸುತ್ತಿದ್ದು ದಕ್ಷಿಣ ಭಾರತದ ಮಾರುಕಟ್ಟೆಗೆ ತನ್ನ ಉಪಸ್ಥಿತಿ ವಿಸ್ತರಿಸಲು ಹಾಗೂ ಗ್ರಾಹಕರೊಂದಿಗೆ ಸಕ್ರಿಯವಾಗುವಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಲಾವಾದ ಸರಣಿಯ ಹೊಚ್ಚಹೊಸ ಸೇರ್ಪಡೆಯು ಯೂನಿಸೊಕ್ 1606 ಚಿಪ್ ಸೆಟ್ ನಿಂದ ಸನ್ನದ್ಧವಾಗಿದೆ ಮತ್ತು ಗ್ಲಾಸಿ ವೈಟ್, ಗ್ಲಾಸಿ ಪರ್ಪಲ್ ಮತ್ತು ಗ್ಲಾಸಿ ಬ್ಲಾಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಈ ವಿಶೇಷ ಬಿಡುಗಡೆ ಕಾರ್ಯಕ್ರಮವು ಉಜ್ವಲ ಸಂಭ್ರಮಾಚರಣೆಯಾಗಿದ್ದು ಅದರಲ್ಲಿ ಈ ಪ್ರದೇಶದ ಪ್ರಮುಖ ಇನ್ಫ್ಲುಯೆನ್ಸರ್ ಗಳು ಮತ್ತು ಒಪೀನಿಯನ್ ಲೀಡರ್ ಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಸ್ಥಳೀಯ ಇನ್ ಫ್ಲುಯೆನ್ಸರ್ ಗಳಿಂದ ತುಂಬಿದ್ದು ಅವರು ದಕ್ಷಿಣ ಭಾರತದ ತಂತ್ರಜ್ಞಾನದ ಪ್ರಿಯ ಗ್ರಾಹಕರ ನಾಡಿಮಿಡಿತವನ್ನು ನಿಜಕ್ಕೂ ಅರ್ಥ ಮಾಡಿಕೊಂಡಿದ್ದು ಅವರು ಯುವ 4ರ ವಿಶೇಷತೆಗಳನ್ನು ರಿಯಲ್ ಟೈಂನಲ್ಲಿ ಪ್ರದರ್ಶಿಸಿದರು.
ಈ ಸಂದರ್ಭ ಕುರಿತು ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ನ್ಯಾಷನಲ್ ಸೇಲ್ಸ್ ಅಂಡ್ ಡಿಸ್ಟ್ರಿಬ್ಯೂಷನ್ ಹೆಡ್ ಸುಧಾಂಶು ಶರ್ಮಾ, “ಯುವ ಸರಣಿಯು ಸತತವಾಗಿ ಉನ್ನತ ಗುಣಮಟ್ಟದ, ಕೈಗೆಟುಕುವ, ಬಳಕೆದಾರರ ಅನುಭವ ಉನ್ನತೀಕರಿಸುವ ಸ್ಮಾರ್ಟ್ ಫೋನುಗಳನ್ನು ಪೂರೈಸುತ್ತಿದೆ. ಯುವ 4 ಮೂಲಕ ನಾವು ಪ್ರವೇಶ ಹಂತದ ಸ್ಮಾರ್ಟ್ ಫೋನ್ ವಲಯವನ್ನು ಮರು ವ್ಯಾಖ್ಯಾನಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸುತ್ತಿದ್ದು ಶಕ್ತಿಯುತ ಕಾರ್ಯಕ್ಷಮತೆ, ಅತ್ಯಾಧುನಿಕ ವಿನ್ಯಾಸ ಮತ್ತು ಅಸಾಧಾರಣ ಬೆಲೆಯಲ್ಲಿ ಹೊಚ್ಚಹೊಸ ವಿಶೇಷತೆಗಳನ್ನು ನೀಡುತ್ತಿದ್ದೇವೆ” ಎಂದರು.
“ಇದಲ್ಲದೆ ಬೆಂಗಳೂರಿನಲ್ಲಿ ಈ ವಿಶೇಷ ಬಿಡುಗಡೆಯು ನಮ್ಮ ರೀಟೇಲ್ ಪ್ರಥಮ ವಿಧಾನವನ್ನು ಎತ್ತಿ ತೋರಿಸು ತ್ತಿದ್ದು ನಮ್ಮ ಉಪಸ್ಥಿತಿಯನ್ನು ನೇರವಾಗಿ ನಮ್ಮ ಗ್ರಾಹಕರಿಗೆ ವಿಸ್ತರಿಸುತ್ತದೆ. ದಕ್ಷಿಣ ಭಾರತವು ನಮಗೆ ಪ್ರಮುಖ ಪ್ರಗತಿಯ ವಲಯವಾಗಿದೆ ಮತ್ತು ಯುವ 4 ಅನ್ನು ಈ ಪ್ರದೇಶದ ತಂತ್ರಜ್ಞಾನ ಪ್ರಿಯರಿಗೆ ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಗ್ರಾಹಕರಿಗೆ ಮೆಚ್ಚುಗೆಯಾಗುವ ಮೂಲಕ ಈ ಚಲನಶೀಲ ಮಾರುಕಟ್ಟೆಯಲ್ಲಿ ಟಾಪ್ ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲು ನೆರವಾಗುತ್ತದೆ” ಎಂದರು.
ಯುವ 4, 16.55 ಸೆಂ.ಮೀ. (6.56”) ಎಚ್.ಡಿ.+ ಪಂಚ್ ಹೋಲ್ ಡಿಸ್ಪ್ಲೇಯನ್ನು 90 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಹೊಂದಿದ್ದು ಇದು ಬಳಕೆದಾರರಿಗೆ ಉಜ್ವಲ ಮತ್ತು ದ್ರವೀಕೃತ ವೀಕ್ಷಣೆಯ ಅನುಭವ ನೀಡುತ್ತದೆ. ಯೂನಿಸೊಕ್ 1606 ಚಿಪ್ ಸೆಟ್ ಹೊಂದಿರುವ ಈ ಡಿವೈಸ್ ಎಲ್ಲ ಅಪ್ಲಿಕೇಷನ್ ಗಳಿಗೂ ಸದೃಢ ಕಾರ್ಯಕ್ಷಮತೆ ನೀಡುತ್ತದೆ.ಇದರ 5000 ಎಂಎಎಚ್ ಬ್ಯಾಟರಿಯು ಆಗಾಗ್ಗೆ ಚಾರ್ಜಿಂಗ್ ಅಡೆತಡೆಯಿಲ್ಲದೆ ವಿಸ್ತರಿಸಿದ ಬಳಕೆಗೆ ಅವಕಾಶ ನೀಡುತ್ತದೆ. ಈ ಸ್ಮಾರ್ಟ್ ಫೋನ್ 4 ಜಿಬಿ+ 4ಜಿಬಿ* ರ‍್ಯಾಮ್ ಆಯ್ಕೆಗಳು ಮತ್ತು 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ವೇರಿಯೆಂಟ್ ಗಳಲ್ಲಿ ಬಂದಿದ್ದು ಬಳಕೆದಾರರಿಗೆ ಎಂದಿಗೂ ಸಂಗ್ರಹದ ಸ್ಥಳ ಖಾಲಿಯಾಗುವುದಿಲ್ಲ. ಹೊಚ್ಚಹೊಸ ಆಂಡ್ರಾಯಿಡ್ 14ರಲ್ಲಿ ನಡೆಯುವ ಯುವ 4 ಸ್ವಚ್ಛ ಮತ್ತು ಇಂಟ್ಯೂಟಿವ್ ಯೂಸರ್ ಇಂಟರ್ ಫೇಸ್ ನೀಡುತ್ತದೆ.
50 ಎಂಪಿ ರಿಯರ್ ಕ್ಯಾಮರಾ ಮತ್ತು 8 ಎಂಪಿ ಫ್ರಂಟ್ ಕ್ಯಾಮರಾದಿಂದ ಸನ್ನದ್ಧವಾದ ಯುವ 4 ಬಳಕೆದಾರರಿಗೆ ಆಕರ್ಷಕ ಛಾಯಾಚಿತ್ರಗಳು ಮತ್ತು ಸೆಲ್ಫೀಗಳನ್ನು ಸುಲಭವಾಗಿ ಸೆರೆ ಹಿಡಿಯಲು ಅವಕಾಶ ನೀಡುತ್ತದೆ, ಅದಕ್ಕೆ ಅದರ ಸುಧಾರಿತ ಕ್ಯಾಮರಾ ಸಿಸ್ಟಂ ಕಾರಣವಾಗಿದೆ. ಈ ಡಿವೈಸ್ ನ ಪ್ರೀಮಿಯಂ ಗ್ಲಾಸಿ ಬ್ಯಾಕ್ ಡಿಸೈನ್, ಸೈಡ್ ಫಿಂಗರ್ ಪ್ರಿಂಟ್ ಸೆನ್ಸರ್ ಮೂಲಕ ಸೊಗಸು ಮತ್ತು ಉನ್ನತೀಕರಿಸಿದ ಭದ್ರತೆಯ ಸ್ಪರ್ಶ ನೀಡುತ್ತದೆ. ಗ್ಲಾಸಿ ವೈಟ್, ಗ್ಲಾಸಿ ಪರ್ಪಲ್ ಮತ್ತು ಗ್ಲಾಸಿ ಬ್ಲಾಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಫೋನ್ ಎಲ್ಲ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದೆ.
ಯುವ 4, 1 ವರ್ಷ ವಾರೆಂಟಿ ಮತ್ತು ಮನೆಯಲ್ಲಿಯೇ ಉಚಿತ ಸೇವೆಯೊಂದಿಗೆ ಬಂದಿದ್ದು ಗ್ರಾಹಕರಿಗೆ ಸಂಪೂರ್ಣ ಮನಃಶ್ಯಾತಿ ಮತ್ತು ಖರೀದಿಸಿದ ನಂತರ ಅಸಾಧಾರಣ ಬೆಂಬಲ ನೀಡುತ್ತದೆ.
ಮನೆಯಲ್ಲಿ ಸೇವೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: https://www.lavamobiles.com/lava_service_at_home/
ಲಭ್ಯತೆ ಮತ್ತು ಬೆಲೆ
ಲಾವಾ ಯುವ 4 ಡಿಸೆಂಬರ್ ಮೊದಲ ವಾರದಿಂದ ಲಾವಾದ ರೀಟೇಲ್ ಮಳಿಗೆಗಳ ಮೂಲಕ ಖರೀದಿಸಲು ಲಭ್ಯ. ಯುವ 4 ಖರೀದಿಸಲು ಬಯಸುವ ಗ್ರಾಹಕರು ಈ ಕೆಳಕಂಡ ಮಾದರಿಗಳಿಂದ ಆಯ್ಕೆ ಮಾಡಿಕೊಳ್ಳಬಹುದು.