Wednesday, 14th May 2025

ದೇಶ ವಿಭಜನೆಯ ಕೆಲಸವು ವಿಫಲವಾದ ಹೋರಾಟ

ಯಲ್ಲಾಪುರ: ಜಾತಿ ಮತ ಮೀರಿದ ಐತಿಹಾಸಿಕ ದಾಖಲೆಗಳು ಭಾರತೀಯ ಸಂಸ್ಕೃತಿಯಲ್ಲಿದೆ.. ಪ್ರಪಂಚದ ಎಲ್ಲಾ ಸಂಸ್ಕೃತಿ ನಾಶವಾದರೂ ಭಾರತೀಯ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ.

ಸರ್ವಧರ್ಮ ಸಮಭಾವವಿರುವುದರಿಂದ ಈ ಸಂಸ್ಕೃತಿ ಉಳಿದಿದೆ. ಬಂದ ಸಾಮ್ರಾಜ್ಯ ತ್ಯಾಗ ಮಾಡಿದ ರಾಮನಿಗೆ ಗುಡಿ ಇದೆ. ಇದ್ದುದನ್ನು ಬಿಟ್ಟು ಹೋದ ವರನ್ನು ಆರಾಧಿಸಬೇಕೆ ವಿನಃ: ಪಡೆದುಕೊಂಡವರನ್ನಲ್ಲಾ. ಭಾರತೀಯರ ನರನಾಡಿಗಳಲ್ಲಿ ಸರ್ವ ಧರ್ಮ ಸಮನ್ವಯತೆ ತುಂಬಿಕೊಂಡಿದೆ. ಮೂಲ ಸಂಸ್ಕೃತಿ ಈ ನೆಲದ ಶ್ರೇಷ್ಟತೆ . ಭಾರತೀಯರಿಗೆ ನನಸಾಗಲೇಬೇಕಾದ ಕನಸುಗಳಿವೆ. ಭವಿಷ್ಯದಲ್ಲಿ ಸಾಧನೆ ಸಾಕಾರಗೊಳ್ಳಲು ಅನೇಕ ಅವಕಾಶ ಗಳಿವೆ. ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟರು.

ಅವರು ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಹಿತ್ಯ ಗಮಕ ಅಧಿವೇಶನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ ಭಾರತದ ಮೇಲೆ ಬೌದ್ಧಿಕ ದಾಳಿ ಯಾಗಬಾರದು. ಮನುಷ್ಯನ ಧ್ವನಿ ಸಂಸ್ಕೃತಿ ಯನ್ನು ಪ್ರತಿನಿಧಿಸುತ್ತದೆ. ಎಂದರು. ಕರ್ನಾಟಕ ಗಮಕ ಕಲಾ ಪರಿಷತ್ತು ನ ಅಧ್ಯಕ್ಷೆ,ಗಮಕಿ ಗಂಗಮ್ಮ ಕೇಶವಮೂರ್ತಿ, ಜಗದೀಶ ಭಂಡಾರಿ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಉಪಸ್ಥಿತರಿದ್ದರು.

ರಘುನಂದನ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಭಟ್ ತಾರೀಮಕ್ಕೀ ಸ್ವಾಗತಿಸಿದರು. ಗಣಪತಿ ಕಂಚಿಪಾಲ ವಂದಿಸಿದರು.

Leave a Reply

Your email address will not be published. Required fields are marked *