ಬೆಂಗಳೂರು: ವಿಶ್ವ ಪಿಕಲ್ ಬಾಲ್ ಲೀಗ್ ನಲ್ಲಿ ಭಾಗವಹಿಸುತ್ತಿರುವ ಬೆಂಗಳೂರು ಫ್ರಾಂಚೈಸಿಯಾದ ಬೆಂಗಳೂರು ಜವಾನ್ ತಂಡದ ಮೇಲೆ ಸೆಲೆಬ್ರಿಟಿಗಳಾದ ಪ್ರಿಯಾ ಅಟ್ಲೀ ಹಾಗೂ ಸಿನೆಮಾ ನಿರ್ಮಾಪಕ ಅಟ್ಲೀ ಅವರುಗಳು ಹೂಡಿಕೆ ಮಾಡುವ ತಂಡವನ್ನು ಖರೀದಿಸಿದ್ದಾರೆ. ಈ ಮೂಲಕ ಇಬ್ಬರೂ ಸೆಲೆಬ್ರಿಟಿಗಳು ಜಗತ್ತಿನ ಕ್ರೀಡಾಲೋಕಕ್ಕೆ ಕಾಲಿಟ್ಟಿದ್ದಾರೆ.
ಇಬ್ಬರೂ ಸೆಲೆಬ್ರಿಟಿಗಳು ಪಿಕಲ್ ಬಾಲ್ ಕ್ರೀಡೆಯ ಅಭಿಮಾನಿಗಳು, ವಿಶ್ವ ಪಿಕಲ್ ಬಾಲ್ ಲೀಗ್ ಇನ್ನಷ್ಟು ಬೆಳೆಯಲು ತಮ್ಮದೇ ಆದ ಪಾತ್ರ ನಿರ್ವಹಿಸಲಿದ್ದಾರೆ.
ಈ ಲೀಗ್‌ನ ಸಹ ಸಂಸ್ಥಾಪಕರಾದ ಟೆನಿಸ್ ಕ್ರೀಡೆಯ ಭಾರತೀಯ ಮಾಜಿ ಆಟಗಾರರಾದ ಗೌರವ್ ನಾಟೇಕರ್ ಹಾಗೂ ಆರತಿ ಪೊನ್ನಪ್ಪ ನಾಟೇಕರ್ ಅವರು ಇದೇ ಜನವರಿ 24ರಂದು ಲೀಗ್ ಉದ್ಘಾಟಿಸಲಿದ್ದಾರೆ. ಈ ಲೀಗ್ʼನಲ್ಲಿ ಆರು ಫ್ರಾಂಚೈಸಿಗಳಿದ್ದು, ಭಾರತದಿಂದ 48 ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಭಾರತೀಯ, ಹ್ಯಾಮರ್ ಥಾಕರೆ ಎಂದೇ ಖ್ಯಾತಿಯ ವೃಶಾಲಿ ಥಾಕರೆ ಬೆಂಗಳೂರು ಜವಾನ್ಸ್ ತಂಡದಲ್ಲಿದ್ದಾರೆ. ಇವರ ಜತೆ ಜ್ಯಾಕ್ ಫೋಸ್ಟರ್, ಕ್ಯಾಟರೀನಾ ಸ್ಟೆವರ್ಟ್, ಟ್ರಾಂಗ್ ಹ್ಯೂಂ ಮೆಕ್ ಕ್ಲೈನ್, ಮಾರ್ಸೆಲೋ ಜಾರ್ಡಿಮ್, ಅಲೆ ಜಾಂಡ್ರಾ ಬೊಬಾರಿಯಾ, ಫೆಲಿಕ್ಸ್ ಗ್ರುನರ್ಟ್, ಮಾವ್ರೋ ಗಾರ್ಸಿಯಾ ಮುಂತಾದವರು ತಂಡದ ಭಾಗವಾಗುವ ಮೂಲಕ, ಫ್ರಾಂಚೈಸಿಗೆ ಬಲ ತುಂಬಿದ್ದಾರೆ.
ಇದೇ ತಿಂಗಳ 24ರಂದು ಲೀಗ್ ಪಂದ್ಯಾವಳಿ ಆರಂಭವಾಗುತ್ತಿದ್ದು, ಬೆಂಗಳೂರು ಫ್ರಾಂಚೈಸಿ ಮಾಲೀಕರಾದ ಅಟ್ಲೀ ಹಾಗೂ ಪ್ರಿಯಾ ಲೀಗ್ ಆರಂಭದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಸಿನೆಮಾ ಜಗತ್ತು ಎಂಬುದು ನಮ್ಮಲ್ಲಿ ಉತ್ಸಾಹ ಮೂಡುವಂತೆ ಮಾಡುತ್ತಿದೆ. ಜನಸಾಮಾನ್ಯರ ಅಭಿರುಚಿಯಾದ ಸಿನೆಮಾ ನಿರ್ಮಿಸು ತ್ತಲೇ ನಮ್ಮ ಚಿತ್ತ ಇರುತ್ತದೆ. ಸಿನೆಮಾಗೆ ಇರುವ ಜನರಲ್ಲಿರುವ ಸಮನಾದ ಆಸಕ್ತಿ, ಕ್ರೀಡೆಯತ್ತಲೂ ಇದೆ. ಕ್ರೀಡೆಯ ಪ್ರತೀ ಕ್ಷಣದ ಫಲಿತಾಂಶ ಹೆಚ್ಚು ಭಾವನಾತ್ಮಕಾವಾಗಿ ಕೂಡಿರುತ್ತದೆ. ಇದು ಸಮುದಾಯಗಳ ಒಗ್ಗಟ್ಟು ಹಾಗೂ ಬದಲಾವಣೆ ತರಲು ಕಾರಣವಾಗುತ್ತದೆ.
ಈ ಲೀಗ್ʼನಿಂದಾಗಿ ಸಿನೆಮಾ ಹಾಗೂ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳು ಕೂಡಾ ಒಂದೇ ಕಡೆ ಜಮಾಯಿಸುವಂತೆ ಮಾಡಿದೆ. ನಾವು ಸಿನೆಮಾ ಕ್ಷೇತ್ರದಿಂದ ಬಂದಿದ್ದು, ಕ್ರೀಡೆಯ ಅನುಭವ ಪಡೆಯಲು ಈ ಲೀಗ್ ಒಂದು ಹೆಜ್ಜೆಯಾಗಿದೆ. ಈ ಮೂಲಕ ನಮ್ಮಲ್ಲೂ ಕ್ರೀಡೆ ಕುರಿತು ಪ್ರೀತಿ ಹಾಗೂ ಕ್ರೀಡಾ ಮನೋಭಾವ, ಸಂಸ್ಕೃತಿ ಬೆಳೆಸಿಕೊಳ್ಳಲು ಸಹಾಯಕವಾಗಿದೆ. ಅದರಲ್ಲೂ ಬೆಂಗಳೂರು ನಗರದ ಜತೆ ನಮಗೆ ಹೇಳಿಕೊಳ್ಳಲಾಗದ ಬಾಂಧವ್ಯ ಇದೆ. ಕಾರಣ, ಸ್ಥಳೀಯದ ಕ್ರೀಡಾ ಪ್ರೀತಿ ಹಾಗೂ ಅಭಿಮಾನ, ಸ್ನೇಹಿತರ ಬಳಗ. ನಗರದೊಂದಿಗಿನ ನಮ್ಮ ನಂಟು ಹೆಚ್ಚು ಆಳವಾಗಿ ಬೆಸೆದಿದ್ದು, ಗಣನೀಯವಾಗಿ ಬೆಳೆದಿದೆ ಎಂದರು.
ಪ್ರಿಯಾ ಹಾಗೂ ಅಟ್ಲೀ ಅವರನ್ನು ಡಬ್ಲ್ಯು.ಪಿ.ಬಿ.ಎಲ್ ಲೀಗ್‌ಗೆ ಸ್ವಾಗತಿಸಿದ ಸಹ ಸಂಸ್ಥಾಪಕ, ಸಿಇಓ ಗೌರವ್ ನಾಟೇಕರ್ ಮಾತನಾಡಿ, ಕ್ರೀಡೆ ಕುರಿತಂತೆ ಕ್ರೀಡಾಭಿಮಾನಿಗಳ ಅನುಭವದ ಮಾತು ಮತ್ತು ಮನೋರಂಜನೆಯು ಜತೆಗೆ ನಮ್ಮ ಭಾರತ ದೇಶದಲ್ಲಿ ಕ್ರೀಡಾಪ್ರೇಮವು ಡಬ್ಲ್ಯು.ಪಿ.ಬಿ.ಎಲ್ ಅ ಗುರಿಯನ್ನು ಮರು ವ್ಯಾಖ್ಯಾನಿಸಲಿದೆ. ಹೀಗಾಗಿ ನಮಗೂ ಅತೀವ ಉತ್ಸಾಹ ಇದೆ ಎಂದು ಫ್ರಾಂಚೈಸಿ ಮಾಲೀಕರು ಹೇಳಿದರು.
ಕ್ರೀಡೆ ಹಾಗೂ ಮನೋರಂಜನೆ ಕ್ಷೇತ್ರದ ಕುರಿತಂತೆ ಫ್ರಾಂಚೈಸಿ ಮಾಲೀಕರಾದ ಪ್ರಿಯಾ ಹಾಗೂ ಅಟ್ಲೀ ಅವರುಗಳ ಪ್ರೀತಿ ಹಾಗೂ ಲೀಗ್ ಪಂದ್ಯಾವಳಿಯು, ಪಿಕಲ್ ಬಾಲ್ ಕ್ರೀಡೆಗೆ ಹೆಚ್ಚಿನ ಪೋಷಣೆ ಸಿಗಲಿದೆ. ಈ ಫ್ರಾಂಚೈಸಿಯ ಜತೆಗಾರಿಕೆ, ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಉಂಟು ಮಾಡಲಿದೆ.
ಹೀಗಾಗಿ, ಕ್ರೀಡಾ ಕ್ಷೇತ್ರ, ಮನೋರಂಜನೆ ಹಾಗೂ ಸಮುದಾಯದ ಹೊಸ ಔನ್ಯತ್ಯಕ್ಕೆ ನೀವೂ ಸಿದ್ದರಾಗಿ, ಇದೇ ಜನವರಿ 24, 2025 ರಂದು ಡಬ್ಲ್ಯು.ಪಿ.ಬಿ.ಎಲ್ ಲೀಗ್ ಆರಂಭವಾಗಲಿದ್ದು, ಕೇಂದ್ರಬಿಂದು ಎನಿಸಲಿದೆ.