ಚಿಕ್ಕಬಳ್ಳಾಪುರ : ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ ರ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆ ಕಾಯ್ದೆ-೧೯೪೮ ೨ಲ ರಡಿ ನೊಂದಣಿಯಾಗಿರುವ ಎಲ್ಲಾ ನೊಂದಾಯಿತ ಕಾರ್ಖಾನೆಗಳು, ಪ್ಲಾಂಟೇಷನ್‌ಗಳು, ಕಾರ್ಯಾಗಾರಗಳು, ಮೋಟಾರು ದೊಡ್ಡ ಬಾಡಿಗೆ ಬಸ್ ಸೇವೆ, ವಿದ್ಯುತ್ತನ್ನು ಉಪಯೋಗಿಸಿ ೧೦ ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಹಾಗೂ ವಿದ್ಯುತ್ ಉಪಯೋಗಿಸದೇ ೨೦ ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಮತ್ತು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ ೧೯೬೧ ಹಾಗೂ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ ೧೯೬೦ ರ ಅಡಿಯಲ್ಲಿ ೫೦ ಕ್ಕಿಂತ ಹೆಚ್ಚಿನ ಎಲ್ಲಾ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ/ಐಟಿಬಿಟಿ ಸಂಸ್ಥೆಗಳು, ಚಾರಿಟೇಬಲ್/ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ಕಾಯ್ದೆಗಳಡಿಯಲ್ಲಿ ನೊಂದಣಿಯಾದ ಎಲ್ಲಾ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ವಂತಿಕೆ ಪಾವತಿಸ ಬೇಕಾಗಿರುತ್ತದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ:ಸAವ್ಯಶಾಇ೫ ಶಾಸನ ೨೦೧೬, ಬೆಂಗಳೂರು ದಿನಾಂಕ:೦೬/೦೪/೨೦೧೭ ರ ತಿದ್ದುಪಡಿಯಲ್ಲಿ ದಿನಾಂಕ:೦೧/೧೨/೨೦೨೦ ರಂದು ನಿರಸನಗೊಳಿಸಿ ಕರ್ನಾಟಕ ರಾಜ್ಯದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಣೆಗೊಳಿಸಲಾಗಿದೆ ಈ ತಿದ್ದುಪಡಿ ಕಾಯ್ದೆಯನ್ನು ಮೂಲ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ ಸೆಕ್ಷನ್ ೭ಎ ಗೆ ಸೇರಿಸಲಾಗಿದೆ. ಆದ್ದರಿಂದ ಪ್ರತಿ ಕಾರ್ಮಿಕನಿಗೆ ರೂ.೨೦/- ಕಾರ್ಖಾನೆಗಳ ಮಾಲೀಕರು/ ಕಾರ್ಯ ಸಂಸ್ಥೆಗಳಿAದ ರೂ.೪೦/- ರಂತೆ ಒಟ್ಟು ರೂ.೬೦/- ಗಳನ್ನು ಕಾರ್ಖಾನೆ/ಕಾರ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಒಟ್ಟು ಸಿಬ್ಬಂದಿ ಮತ್ತು ಕಾರ್ಮಿಕರ ಸಂಖ್ಯೆಗನುಗುಣವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಈ ಕಾಯ್ದೆಯಡಿಯಲ್ಲಿ ಆನ್‌ಲೈನ್ ಮುಖಾಂತರ ವಂತಿಗೆ ಪಾವತಿಸಬೇಕಾದ ವೆಬ್ ಸೈಟ್‌ನಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಪಾವತಿಗೆ ಕಡೆಯ ದಿನಾಂಕ:೧೫/೦೧/೨೦೨೫ (೨೦೨೪ ನೇ ಕ್ಯಾಲೆಂಡರ್ ವರ್ಷಕ್ಕೆ) ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ ೩ ತಿಂಗಳಿಗೆ ವಾರ್ಷಿಕವಾಗಿ ಶೇ.೧೨% ರಂತೆ ಹಾಗೂ ನಂತರದ ತಿಂಗಳಿಗೆ ವಾರ್ಷಿಕವಾಗಿ ಶೇ.೧೮% ರಂತೆ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು, ಹಾಗೂ ಕಲ್ಯಾಣ ಆಯುಕ್ತರಿಂದ ತಪಾಸಣೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ತನಿಖೆಗೆ ಒಳಪಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.೪೮, ೧ನೇ ಮಹಡಿ, ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-೫೬೦೦೨೨, ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: ೦೮೦-೨೩೪೭೫೧೮೮, ೮೨೭೭೨೯೧೧೭೫, ೮೨೭೭೧೨೦೫೦೫, ೯೧೪೧೫೮೫೪೦೨, ೯೧೪೧೬೦೨೫೬೨ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.