ಚಿಕ್ಕಬಳ್ಳಾಪುರ : ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭಾನುವಾರ ಚಿಕ್ಕಬಳ್ಳಾಪುರ ನಗರದ ೧೩ ಮತ್ತು ೧೭ ವಾರ್ಡ್ಗಳಲ್ಲಿ ಖುದ್ದಾಗಿ ಕ್ಷೇತ್ರ ವೀಕ್ಷಣೆ ಮಾಡಿದರು. ಈವೇಳೆ ಮತಗಟ್ಟೆ ಅಧಿಕಾರಿ ಹಾಗೂ ಇತರ ಸಿಬ್ಬಂದಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬ0ಧ ಮನೆ ಮನೆ ಸರ್ವೆ ಕಾರ್ಯ ಕೈಂಡಿದ್ದಾರೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ, ತಿದ್ದುಪಡಿ ಕಾರ್ಯ ಮತ್ತು ನವ ಮತದಾರರ ನೋಂದಣಿ ಕಾರ್ಯವನ್ನು ಡಿಸೆಂಬರ್ ೮ರೊಳಗೆ ಪೂರ್ಣಗೊಳಿಸಬೇಕಿದೆ ಆ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ನೋಂದಣಿ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲಿಸಲು ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ವಿವಿಧ ಕಡೆ ಪರಿಶೀಲಿಸಲಾಗಿದೆ.
ಸ್ಥಳೀಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಭಾನುವಾರದ ರಜಾದಿನವನ್ನು ಲೆಕ್ಕಿಸದೆ ಜಿಲ್ಲೆಯಾದ್ಯಂತ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದಾರೆ. ನೋಂದಣಿಯ ಪ್ರಗತಿ ಕಾರ್ಯವು ಆಶಾದಾಯಕವಾಗಿದೆ ಎಂದು ಮಾಹಿತಿ ನೀಡಿದರು.
ನ೨೦ ಮತ್ತು ಡಿ೩ ಮತ್ತು ೪ ರಂದು ವಿಶೇಷ ಅಭಿಯಾನ
ಡಿಸೆಂಬರ್ ೮ ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಲವು ಕಾರಣಗಳಿಂದ ತಮ್ಮ ಕುಟುಂಬದ ಸದಸ್ಯರು ಬಿಟ್ಟು ಹೋಗಿದ್ದಲ್ಲಿ ಅಥವಾ ಹೊಸದಾಗಿ ಸೇರ್ಪಡೆ ಆಗಿದ್ದರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಮತ್ತು ತೆಗೆದುಹಾಕಲು ಅವಕಾಶವಿದೆ.
ಅಂತಿಮ ಪಟ್ಟಿಯನ್ನು ೨೦೨೩ರ ಜನವರಿ ೫ ರಂದು ಪ್ರಕಟಿಸಲಾಗುತ್ತದೆ. ನೋಂದಣಿ ಕಾರ್ಯವು ಪ್ರತಿನಿತ್ಯ ಚಾಲನೆ ಯಲ್ಲಿದ್ದು, ನವೆಂಬರ್ ೨೦ ಮತ್ತು ಡಿಸೆಂಬರ್ ೩, ೪ ರಂದು ಒಟ್ಟು ೩ ದಿನ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಮೂಲಕ ನವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಕಾರ್ಯಗಳನ್ನು ಮಾಡಲು ಜಿಲ್ಲೆಯಲ್ಲಿ ಯೋಜಿಸಲಾಗಿದೆ. ಅಲ್ಲದೆ ಆನ್ ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಜೊತೆಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ನೀಡಿ ನೊಂದಾಯಿಸಿಕೊಳ್ಳುವ0ತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ತಹಸೀಲ್ದಾರ್ ಗಣಪತಿ ಶಾಸ್ತಿç ಸ್ಥಳೀಯ ಮತಗಟ್ಟೆ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಹಾಜರಿದ್ದರು.