Saturday, 24th May 2025

ಒಕ್ಕಲಿಗ ಸಮುದಾಯಕ್ಕೆ ಸರಕಾರ ಅವಮಾನ

ತುಮಕೂರು: ಬಿಜೆಪಿ ಸರಕಾರದಿಂದ ಒಕ್ಕಲಿಗ ಸಮುದಾಯಕ್ಕೆ ಅವಮಾನವಾಗಿದೆ ಎಂದು ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.

ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮವನ್ನಾಗಿ ಮಾರ್ಪಾಡು ಮಾಡಲು ಹೊರಟಿರುವ ರಾಜ್ಯ ಸರಕಾರದ ನಡೆ ಟೀಕೆಗೆ ಗುರಿಯಾಗಿದೆ.

ನವೆಂಬರ್ 11ರಂದು ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಮಣ್ಣು ಸಂಗ್ರಹಿಸಲು ರಥಯಾತ್ರೆಗಳನ್ನು ಬಿಟ್ಟಿದ್ದು, ಒಕ್ಕಲಿಗ ಸಮುದಾಯದ ಆದಿ ಚುಂಚನಗಿರಿ ಮಠದ ಶ್ರೀಗಳಾದ ಡಾ. ಶ್ರೀ ನಿರ್ಮಲಾನಂದ ನಾಥ ಶ್ರೀಗಳ ಭಾವಚಿತ್ರ, ಪಟ್ಟನಾಯಕನಹಳ್ಳಿ ಮಠದ ನಂಜಾವದೂತ ಶ್ರೀಗಳ ಭಾವಚಿತ್ರ ಹಾಗೂ ಒಕ್ಕಲಿಗ ಸಮುದಾ ಯದ ಪ್ರಮುಖ ಸ್ವಾಮೀಜಿಗಳ ಭಾವಚಿತ್ರ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಭಾವಚಿತ್ರ, ಹಾಗೂ ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಾಗೂ ಒಕ್ಕಲಿಗ ಜನಾಂಗದ ಪ್ರಮುಖ ನಾಯಕರುಗಳ ಭಾವಚಿತ್ರಗಳನ್ನು ಹಾಕದೆ, ಕೇವಲ ಬಿಜೆಪಿ ನಾಯಕರುಗಳ ಭಾವಚಿತ್ರಗಳನ್ನು ಹಾಕುವ ಮೂಲಕ ಇಡೀ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿರುವ ಬಿಜೆಪಿ ಸರಕಾರಕ್ಕೆ ಒಕ್ಕಲಿಗ ಸಮುದಾಯದ ಮುಖಂಡರು ಧಿಕ್ಕಾರ ಹಾಕಿದ್ದಾರೆ.