Saturday, 10th May 2025

ಸೆ.11: ‘ವಿವೇಕಧಾರಾ’ ಕೃತಿ ಲೋಕಾರ್ಪಣೆ

ತುಮಕೂರು : ಐತಿಹಾಸಿಕ ಚಿಕಾಗೋ (Chicago) ಪ್ರಥಮ ವಿಶ್ವಧರ್ಮ ಸಮ್ಮೇಳನದ ಸವಿಸ್ಮರಣೆಗಾಗಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಇದೇ ಸೆ.11ರಂದು ಬುಧವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.

2004ರಲ್ಲಿ ಸ್ಪೇನ್‌ದೇಶದ ಬಾರ್ಸಿಲೋನಾದಲ್ಲಿ ನೆರವೇರಿದ ನಾಲ್ಕನೇ ವಿಶ್ವಧರ್ಮ ಸಮ್ಮೇಳನ(Vishwadharma Sammelana) ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ನಿರ್ಭಯಾನಂದ ಸರಸ್ವತೀ (Swamy Nirmalananda Saraswathy) ರವರ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮವು ಸಂಜೆ 6 ಗಂಟೆಗೆ ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜನೆಗೊಂಡಿದೆ.

ಗ್ರಂಥ ಲೋಕಾರ್ಪಣ: ತುಮಕೂರು ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ(Swamy Veereshanand Saraswathy) ರವರು ಬರೆದಿರುವ, ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನಾಧರಿಸಿದ, ವಿಭಿನ್ನ ಆಯಾಮಗಳನ್ನು ಪರಿಚಯಿಸುವ ಲೇಖನಗಳ ಗುಚ್ಛವಾದ ‘ವಿವೇಕಧಾರಾ’ ಕೃತಿ(Vivekadhara Book) ಯನ್ನು ಪೂಜ್ಯ ಸ್ವಾಮಿ ನಿರ್ಭಯಾನಂದರು ಲೋಕಾರ್ಪಣೆಗೈದು ದಿಕ್ಸೂಚಿ ಭಾಷಣ ಮಾಡುವರು.

ಸಾಧಕರಿಗೆ ಪುರಸ್ಕಾರ
ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವಿತೀಯ ಸಾಧನೆಗೈದ ಅಕ್ಷರ ಪರಾಶರ ನಾಡೋಜ ಡಾ|| ಟಿ.ವಿ.ವೆಂಕಟಾಚಲ ಶಾಸ್ತ್ರಿ, ಅಧ್ಯಾತ್ಮ ಚಿಂತಕಿ ತಾಯಿ ಲಲಿತಾಶಾಸ್ತ್ರಿ, ಧ್ಯೇಯನಿಷ್ಠ ರಾಷ್ಟ್ರ ಚಿಂತಕ ಡಾ|| ಬಾಬು ಕೃಷ್ಣಮೂರ್ತಿ ಮತ್ತು ಜನಪರ ಸೇವಾರತ್ನ ಶ್ರೀ ಹರಿಪ್ರಕಾಶ್ ಕೋಣೇಮನೆ ಇವರುಗಳನ್ನು ಆಶ್ರಮದ ವತಿಯಿಂದ ಸತ್ಕರಿಸಲಾಗುವುದು.

Leave a Reply

Your email address will not be published. Required fields are marked *