Saturday, 10th May 2025

ಒಣ ದ್ರಾಕ್ಷಿ ಖರೀದಿ, ವಂಚನೆ: ಗುಜರಾತ್ ವ್ಯಾಪಾರಿ ಬಂಧನ

ವಿಜಯಪುರ : ಜಿಲ್ಲೆಯ ಒಣ ದ್ರಾಕ್ಷಿಯನ್ನು ಅತಿದೊಡ್ಡ ಪ್ರಮಾಣದಲ್ಲಿ ಖರೀದಿಸಿ, ಅವರಿಗೆ ಹಣವನ್ನು ನೀಡದೆ ಮೋಸ ಮಾಡಿರುವ ಗುಜರಾತ್ ಮೂಲದ ವ್ಯಾಪಾರಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾ ಗಿದ್ದಾರೆ.

ತನಿಖೆಗಾಗಿ ಗುಜರಾತ್ ಗೆ ತೆರಳಿದ ತಂಡ ಒಂದು ವಾರಗಳ ಕಾಲ ಅಹಮದಾ ಬಾದ್ ನಲ್ಲಿ ಬೀಡುಬಿಟ್ಟಿದ್ದ ತಂಡ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪ್ರಕರಣದಲ್ಲಿ ಅಹಮದಾಬಾದ್ ಮೂಲದ ಪ್ರಮುಖ ಆರೋಪಿ ಕೃನಾಲಕುಮಾರ್ ಮಹೇಂದ್ರಕುಮಾರ್ ಪಟೇಲ್ ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನು 7 ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜಿಲ್ಲೆಯ ಹಲವಾರು ರೈತರಿಂದ ಒಣ ದ್ರಾಕ್ಷಿ ಖರೀದಿಸುತ್ತಿದ್ದ ಗುಜರಾತ್ ರಾಜ್ಯದ ಅಹಮದಾಬಾದ್ ಮೂಲದ ವ್ಯಾಪಾರಿಗಳು, ಅವರಿಗೆ ಹಣ ನೀಡದೆ ಸತಾಯಿಸುತ್ತಿದ್ದರು. ಹಣ ಕೇಳಿದ ರೈತರಿಗೆ ಬೆದರಿಕೆ ಹಾಕುತ್ತಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ, ಹೆಚ್ಚುವರಿ ಎಸ್ಪಿ ರಾಮ್ ಅರಸಿದ್ಧಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.