ಇಂಡಿ:ರಾಜ್ಯ ಸರಕಾರಿ ತಾಲೂಕಾ ನೌಕರರ ಸಂಘದ ಚುನಾವಣೆ ನಿನ್ನೆ ನೌಕರರ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಗೆಲುವು ಸಾಧಿಸಿದ ನಂತರ ಅಧ್ಯಕ್ಷ ಬಸವರಾಜ ರಾವೋರ, ಶಿಕ್ಷಕ ಸುಧಾಕರಗೌಡ ಬಿರಾದಾರ, ನಿಜಣ್ಣಾ ಕಾಳೆ, ವ್ಹಿ.ಪಿ ನಾಯಕ ಮೇತ್ರಿ ಹಾಗೂ ಅವರ ತಂಡ ಶ್ರೀಶಾಂತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಸಹಿ ಹಂಚಿ ಸಂಭ್ರಮಿಸಿದರು.
೨೦೨೪ -೨೯ನೇ ಸಾಲಿನ ಅವಧಿಯ ತಾಲೂಕಾ ಅಧ್ಯಕ್ಷ ಖಜಾಂಚಿ ಮತ್ತು ರಾಜ್ಯ ಪರಿಷ್ಯತ ಸ್ಥಾನಗಳಿಗೆ ಚುನಾವಣೆ ಜರುಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ರಾವೋರ ಹಾಗೂ ಎಸ್.ಡಿ ಪಾಟೀಲ ಪ್ರತಿಸ್ಫರ್ಧಿಗಳಾಗಿದ್ದು ಒಟ್ಟು ೩೩ ಮತದಾರರಿದ್ದುಬಸವರಾಜ ರಾವೋರ ೧೮ ಮತಗಳು ಪಡೆದರೆ ಎಸ್.ಡಿ ಪಾಟೀಲ ೧೫ ಮತಗಳು ಪಡೆದರು ೩ ಮತಗಳ ಅಂತರಿAದ ಬಸವರಾಜ ರಾವೋರ ತಂಡಕ್ಕೆ ವಿಜಯದ ಮಾಲೆ ದೊರಕ್ಕಿದ್ದು ಬಸವರಾಜ ರಾವೋರ ಅಧ್ಯಕ್ಷ ಗದ್ದುಗೆ ಏರಿದರು.ಖಜಾಂಚಿ ಹುದ್ದೆಗೆ ಎಸ್.ಎಸ್ ಪ್ಯಾಟಿ ಹಾಗೂ ವ್ಹಿ.ಪಿ ನಾಯಕ ಸ್ಪರ್ಧೆ ಮಾಡಿದರು. ಒಟ್ಟು ೩೩ ಮತದಾರರಲ್ಲಿ ೧೭ ಮತ ಪಡದರೆವ್ಹಿ.ಪಿ ನಾಯಕ ೧೬ ಮತಗಳು ಪಡೆದು ೧ ಮತಗಳ ಅಂತರದಿಂದ ಎಸ್.ಎಸ್ ಪ್ಯಾಟಿ ಜಯಭೇರಿಯಾಗಿದ್ದಾರೆ.
ರಾಜ್ಯ ಪರಿಷ್ಯತ ಸ್ಥಾನಕ್ಕೆ ಬಸವರಾಜ ಮೇತ್ರಿ ಹಾಗೂ ವಿಜಯಕುಮಾರ ಪೋಳ ೧೬ ಮತಗಳು ಪಡದರು ಮೇತ್ರಿ ೧೭ ಮತಗಳು ಪಡದರೆವಿಜಯಕುಮಾರ ೧೬ ಮತಗಳು ಪಡೆದು ೧ ಮತಗಳ ಅಂತರದಿAದ ಮೇತ್ರಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಂಬಣ್ಣಾ ಸುಣಗಾರ ತಿಳಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ತಾಲೂಕಿನಲ್ಲಿ ನಡೆದ ಸ.ನೌ.ಸಂಘದ ಚುನಾವಣೆ ಅತ್ಯೆಂತ ತುರುಸಿನ ಚುನಾವಣೆಯಾಗಿ ಏರ್ಪಟ್ಟಿತ್ತು ಯಾರು ಗೆಲ್ಲುತ್ತಾರೆ ಎಂಬ ಕುತೋಹಲದಲ್ಲಿ ಸಾರ್ವಜನಿಕರು ಕಾತರದಲ್ಲಿದ್ದರು ಇಂದು ಇದಕ್ಕೆ ಇತೀಶ್ರೀ ಹಾಡಿದಂತಾಯಿತು.
ಅಧ್ಯಕ್ಷ ಬಸವರಾಜ ರಾವೋರ, ಶಿಕ್ಷಕ ಸುಧಾಕರಗೌಡ ಬಿರಾದಾರ, ಮುಖ್ಯೋಪಾಧ್ಯಾಯ ನಿಜಣ್ಣಾ ಕಾಳೆ, ಡಾ.ಕಾಂತು ಇಂಡಿ.ಶಿವಶರಣ ಹಂಜಗಿ, ವ್ಹಿ.ಪಿ ನಾಯಕ ಮೇತ್ರಿ , ಎ ಸ್.ವ್ಹಿ ಹರಳಯ್ಯಾ, ವಾಯ್.ಟಿ ಪಾಟೀಲ, ಪಿ.ಎಸ್ ಚಾಂದಕವಟೆ, ಆರ್.ಜೆ ಬಂಡಿ, ಮಲ್ಲಿಕಾರ್ಜುನ ಹೊಸಮನಿ, ಎಂ.ಎ ಅಥಣಿ, ವಿಜಯಕುಮಾರ ಮಾನೆ , ರಾಜು ಕುಲಕರ್ಣಿ ಸೇರಿದಂತೆ ಅನೇಕ ಶಿಕ್ಷಕರು ,ಸರಕಾರಿ ನೌಕರರು ಇದ್ದರು.
ಪೋಟೋಕ್ಯಾಪ್ಸನ್ ೧೭ ಇಂಡಿ೦೧- ರಾಜ್ಯ ಸರಕಾರಿ ತಾಲೂಕಾ ನೌಕರರ ಸಂಘದ ಚುನಾವಣೆ ನಿನ್ನೆ ನೌಕರರ ಸಂಘದ ಕಾರ್ಯಾಲಯದಲ್ಲಿ ನಡೆಯಿತು ಗೆಲುವು ಸಾಧಿಸಿದ ನಂತರ ಅಧ್ಯಕ್ಷ ಬಸವರಾಜ ರಾವೋರ, ಶಿಕ್ಷಕ ಸುಧಾಕರಗೌಡ ಬಿರಾದಾರ, ನಿಜಣ್ಣಾ ಕಾಳೆ,ವ್ಹಿ.ಪಿ ನಾಯಕ ಮೇತ್ರಿ ಹಾಗೂ ಅವರ ತಂದ ಶ್ರೀಶಾಂತೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆಸಲ್ಲಿಸಿ ಸಹಿ ಹಂಚಿ ಸಂಭ್ರಮಿಸಿದರು.
ಇದನ್ನೂ ಓದಿ: #VijayapuraBreakinf