Sunday, 11th May 2025

Vijayapura News: ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೆ ಸಾಮಾನ್ಯ ಸಭೆಯಲ್ಲಿ 23 ಸದಸ್ಯರೆಲ್ಲರಿಂದ ಒಕ್ಕೂರಲಿನಿಂದ ಠರಾವು ಪಾಸು

ಇಂಡಿ: ಇಂದು ಪುರಸಭೆಯಲ್ಲಿ ಅಧ್ಯಕ್ಷ ಲಿಂಬಾಜೀ ರಾಠೋಡ ಅಧ್ಯಕ್ಷತೆಯಲ್ಲಿ ಹಾಗೂ ಉಪಾಧ್ಯಕ್ಷ ಜಹಾಂಗೀರ ಸೌದಾಗರ ಇವರ ಘನ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಜರುಗಿತ್ತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿಮಠ ಪುರಸಭೆಯ ಸಾಮಾನ್ಯ ಸಭೆಯ ಹಿಂದಿನ ನಡಾವಳಿ ಓದುತ್ತಿದಂತೆ ಅಗಸ್ಟ೨೦೨೪ರಿಂದ ಅ,೨೦೨೪ರವರೆಗಿನ ಜಮಾ, ಖರ್ಚು ಅನುಮತಿ ನೀಡುವಂತೆ ಕೇಳಿಕೊಂಡಾಗ ಸಿಟ್ಟಿಗೆದ್ದ ಪುರಸಭೆ ಸದಸ್ಯ ಅಯೂಬ ಬಾಗವಾನ ನಗರೋಥಾನ ಯೋಜನೆಯಡಿ ವಾರ್ಡ೧೭ ರಲ್ಲಿ ಕಾಮಗಾರಿ ನಡೆದಿದೆ ವಾರ್ಡ ಸದಸ್ಯರ ಗಮನಕ್ಕೆ ತರದೆ ಪೊಲೀಸ್‌ರಿಂದ ದಬ್ಬಾಳಿಕೆ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದೀರಿ ಇರಲಿ ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಬೇಡ ಕಳೆದ ವರ್ಷಗಳು ಗತಿಸಿದರೂ ಇನ್ನೂ ಡ್ರೇನೇಜ್ ಮಾಡುತ್ತಿಲ್ಲ.

ವಾರ್ಡನಲ್ಲಿ ಅಕ್ಕಪಕ್ಕದ ಮನೆಗಳಿಗೆ ಡ್ರೇನೇಜ್ ನೀರು ನುಗ್ಗುತ್ತಿವೆ ಸಾರ್ವಜನಿಕರು ನಮಗೆ ಬೈಯುತ್ತಿದ್ದಾರೆ ಮಗಿಸುತ್ತಿರೂ ನಮ್ಮ ಹೆಸರು ಹಾಳು ಮಾಡುವ ಉದ್ದೇಶವೇನಾದರೂ ಇದೆಯೇ ಈ ಹಿಂದೆ ಇದ್ದ ಡ್ರೇನೇಜ ಚೆನ್ನಾಗಿತ್ತು ನಗರೋಥ್ಯಾನದ ೧ ಕೋಟಿ ಹಣ ಬಂದಿದೆ ಎಂದು ಕಳಪೆ ಕಾಮಗಾರಿ ಮಾಡಿ ಇನ್ನು ಮುಗಿದಿಲ್ಲ ಥರ್ಡಪಾರ್ಟೀ ಇನಿಸ್ಪೇಕೇಶನ್ ಮಾಡಿ ಸರಕಾರದ ಹಣ ದುರುಪಯೋಗಪಡಿಸಿಕೊಂಡಿದ್ದೀರಿ ನಾನು ಪುರಸಭೆ ಸದಸ್ಯರಾಗಿದ್ದರೂ ಕೂಡಾ ನಿಮ್ಮ ವಿರುಧ್ಧ ಪುರಸಭೆಗೆ ಬೀಗ ಹಾಕಿ ಪತ್ರಿಭಟನೆ ಮಾಡುವುದಾಗಿ ಪುರಸಭೆ ಸದಸ್ಯ ಅಯೂಬ ಬಾಗವಾನ ಅಧಿಕಾರಿಗಳ, ಗುತ್ತಿಗೆದಾರರ ವಿರುಧ್ಧ ಎಚ್ಚರಿಕೆ ನೀಡಿದರು. ಪುರಸಭೆ ಇಇ ಅಶೋಕ ಚಂದನ ಒಂದೇ ವಾರದಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದರು.

ಅನೀಲಗೌಡ ಬಿರಾದಾರ ಮಾತನಾಡಿ ಸಾಕುಮಾಡ್ರೀ ಇಷ್ಟೇಲ್ಲಾ ಖರ್ಚು ಮಾಡಿದ್ದು ಪಟ್ಟಣದ ಅಭಿವೃದ್ದಿಗೆ ಅಲ್ಲ ನೀರಿನ ಪೌಡರ್, ಬ್ಲೀಚಿಂಗ್ ಟೆಂಡರ್ ಕರೆಯದೆ ಮ್ಯಾನುವಲ್ಲ ಯಾಕೆ ಮಾಡಿದ್ದೀರಿ ನಿಮ್ಮ ಬಂಡವಾಳ ಇಂದು ಬಯಲಾಗಿದೆ. ನೀವು ಬಂದು ೧೩ ತಿಂಗಳಾಯಿತು ಯಾವ ವಾರ್ಡಗಳಿಗೆ ಭೇಟಿ ನೀಡಿದ್ದೀರಿ ಯಾವ ಕಾಮಗಾರಿ ವೀಕ್ಷಣೆ ಮಾಡಿಲ್ಲ,೧.೫೦ ಕೋಟಿ ಅಷ್ಟು ಹಣ ನುಂಗಿದ್ದೀರಿ ಎಂದು ಆರೋಪಿಸಿ ಕೆಲಸ ಮಾಡದಿದ್ದರೆ ಬೇರೆ ಕಡೆ ಹೋಗಿ ಎಂದು ಪುರಸಭೆ ಮುಖ್ಯಾಧಿಕಾರಿಗಳ ವಿರುಧ್ಧ ಅನೀಲಗೌಡ ಬಿರಾದಾರ ಹಿಗ್ಗಾಮುಗ್ಗಾ ಹರಿಹಾಯ್ದುರು . ಪುರಸಭೆ ಮುಖ್ಯಾಧಿಕಾರಿ ನಡೆ ಸರಿಯಾಗಿಲ್ಲ ಎಂದು ಪಕ್ಷಭೇದ ಮರೆತು ೨೩ ಸದಸ್ಯರೆಲ್ಲರೂ ಒಕ್ಕೂರಲಿನಿಂದ ಅಧಿಕಾರಿ ಬೇರೆ ಕಡೆ ವರ್ಗಾವಣೆ ಮಾಡುವಂತೆ ಠರಾವು ಪಾಸು ಮಾಡಿದರು.

ನಗರದಲ್ಲಿ ೨೪*೭ ಪ್ರತಿಮನೆಗಳಿಗೆ ನಲ್ಲಿಯಿಂದ ನೀರು ಒದಗಿಸಲಾಗಿದೆ ಪ್ರಾರಂಭದಿAದ ಇಂದಿನವರೆಗೂ ಸಾರ್ವಜನಿಕರು ೨೦ ರಿಂದ ೩೦ ಸಾವಿರದಷ್ಟು ನೀರಿನ ಕರ ಕಟ್ಟಿಲ್ಲ, ಹೀಗಾಗಿ ಒಮ್ಮೇಲ್ಲೆ ಕಟ್ಟುವುದು ಅಸಾಧ್ಯ ಸಾರ್ವಜನಿಕರಿಗೆ ಶೇ,೫೦ ರಷ್ಟು ಪ್ರತಿಶತ ನೀರಿನ ಕರಕಟ್ಟಲು ಅವಕಾಶ ಒದಗಿಸಿ ಕೂಡಲೆ ಠರಾವು ಮಾಡಿ ಎಂದು ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ್ ಸಭೆಯಲ್ಲಿ ಸೂಚಿಸಿದರು.