Saturday, 10th May 2025

Vijayapura News: ಶ್ರೀಸಿದ್ದೇಶ್ವರ ಶ್ರೀಗಳು ಪ್ರವಚನ ಗಳ ಮೂಲಕ ಹೃದಯಶ್ರೀಮಂತರನ್ನಾಗಿಸಿದ್ದಾರೆ

ಇಂಡಿ: 21ನೇ ಶತಮಾನದಲ್ಲಿ ಸಂತಶ್ರೇಷ್ಠ ಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮಿಕ ಜ್ಞಾನ ದಾಸೋಹದ ಮೂಲಕ ಈ ಭಾಗದ ಜನರಿಗೆ ಹೃದಯಶ್ರೀಮಂತರನ್ನಾಗಿಸಿದ್ದಾರೆ ಎಂದು ತಾಲೂಕಾ ಸರಾಫ್ ವರ್ತಕ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಹೇಳಿದರು.

ಸರಾಫ್ ಸಂಘದ ವರ್ತಕರು ಹಾಗೂ ಬೆಳ್ಳಿ ಬಂಗಾರ ಆಭರಣ ತಯಾರಕರು ಇಂಡಿ ವತಿಯಿಂದ ಹಮ್ಮಿಕೊಂಡ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಮಾತೆಯ ಉದರ ದಲ್ಲಿ ಕಾಲಾಂತರಗಳಲ್ಲಿ ಈ ಭೂಮಿ ಪಾವನ ಮಾಡಲು ಅನೇಕ ಯುಗಪುರುಷರು ಜನ್ಮ ತಾಳುತ್ತಾರೆ ಇಂತಹ ಮಹಾನ ದಾರ್ಶನಿಕರ ಸಾಲಿನಲ್ಲಿ ಶ್ರೀಸಿದ್ದೇಶ್ವರ ಶ್ರೀಗಳು, ಸಿದ್ದೇಶ್ವರ ಶ್ರೀಗಳು ನಿಸರ್ಗ, ಪ್ರಕೃತಿ ಚರಾಚರ ವಸ್ತುಗಳಲ್ಲಿ ಹೂ, ಪ್ರಾಣಿ, ಪಕ್ಷಿಗಳು ಹೀಗೆ ಎಲ್ಲದರಲ್ಲಿ ದೇವರಿದ್ದಾನೆ ಎಂದು ಅವರ ವಾಣಿಯಾಗಿತ್ತು.

12ನೇ ಶತಮಾನದಲ್ಲಿ ಸಮ-ಸಮಾಜಕ್ಕಾಗಿ ಅಣ್ಣ ಬಸವಣ್ಣ ಕ್ರಾಂತಿ ಮಾಡಿದರೆ ೨೧ನೇ ಶತಮಾನದಲ್ಲಿ ಸಂತ ಶ್ರೇಷ್ಠ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಅಧ್ಯಾತ್ಮಿಕ ಜ್ಞಾನ ದೀಪ ಹಚ್ಚಿ ವಿಶ್ವವನ್ನೆ ಬೆಳಗಿಸಿದ ಮಹಾನ ತತ್ವಜ್ಞಾನಿ ಇವರ ಆದರ್ಶಗಳು ಸದಾ ಪಾಲಿಸೋಣ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ, ರಮೇಶ ಪೋದ್ದಾರ ಮಾತನಾಡಿದರು.

ಸರಾಫ ವರ್ತಕ ಸಂಘದ ತಾಲೂಕಾ ಉಪಾಧ್ಯಕ್ಷ ರಮೇಶ ಪೋದ್ದಾರ, ಶ್ರೀಶ್ಯಲ ಅರ್ಜುಣಗಿ, ವಿಜಯಕುಮಾರ ಮಹಿಂದ್ರಕರ್, ನಾಮದೇವ ಡಾಂಗೆ, ಸಂದೀಪ ಧನಶೆಟ್ಟಿ, ಅಬು ಅರ್ಜುಣಗಿ, ಗಂಗಾಧರ ಬಡೀಗೇರ, ಧರೇಪ್ಪ ಉಡಚಣ,ಸುಜೀತ ಲಾಳಸಂಗಿ ಸೇರಿದಂತೆ ಅನೇಕ ವರ್ತಕರು ಇದ್ದರು.

ಇದನ್ನೂ ಓದಿ: #VijayapuraBreaking