Friday, 16th May 2025

Vidwan Exam: ವಿದ್ವಾನ್ ಪರೀಕ್ಷೆಯಲ್ಲಿ ಹೆಚ್ಚು ಅಂಕ-ಅಭಿನಂದನೆ

ತುಮಕೂರು: ತಾಲೂಕಿನ ಕೆಸ್ತೂರು ಗ್ರಾಮದ ಶ್ರೀ ಚೊಕ್ಕನಾಥೇಶ್ವರ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ ದೇವಾಲಯ ಪ್ರಧಾನ ಅರ್ಚಕ ಟಿ.ಎಸ್ ನಂದಕುಮಾರ್ ಅವರು, ವೀರಶೈವ ವಿದ್ವಾನ್ ಮತ್ತು ವೀರಶೈವ ಆಗಮ ಪ್ರವೀಣ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗದ ನಿಸ್ವಾರ್ಥ ಸೇವಾ ಸಂಘ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಿಸ್ವಾರ್ಥ ಸೇವಾ ಸಂಘದ ರಾಜ್ಯ ಘಟಕ, ಯುವ ಘಟಕ, ಜಿಲ್ಲಾ ಘಟಕ, ಹಾಗೂ ತಾಲೂಕು ಘಟಕದ ಸರ್ವ ಪದಾಧಿಕಾರಿಗಳು ಮತ್ತು ಆಜೀವ ಸದಸ್ಯರು ಉಪಸ್ಥಿತರಿದ್ದರು.