Wednesday, 14th May 2025

ವಿ.ಎಚ್.ಪಿ.ಯಿಂದ ಡಿ 4 ರಂದು ಬೃಹತ್ ಸಂಕೀರ್ತನ  ಮೆರವಣಿಗೆ: ಶಿವರಾಜ್ ಸಂಗೋಳಗಿ

ಕಲಬುರಗಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಲಬುರಗಿ ವಿಭಾಗದ ವತಿಯಿಂದ ಡಿ,4ರಂದು ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಬೃಹತ್ ಸಂಕೀರ್ತನ ಮೆರವಣಿಗೆ ಆಯೋಜಿಸ ಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ,ಅಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಷಣ್ಮುಖ ಶಿವಯೋಗಿ ಮಠದಿಂದ ಶ್ರೀ ಬಸವೇಶ್ವರರ ವೃತ್ತ ಬಿಜಾಪುರ ರಸ್ತೆ ವರೆಗೂ ನಂತರ ಎಪಿಎಂಸಿ ಆವರಣದಲ್ಲಿ ಸಮಾರಂಭ ನಡೆಯಲಿದೆ ಎಂದರು.

ಡಿ 5ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಶ್ರೀ ಅಂಜನಾದ್ರಿ ಪರ್ವತ ಕಿಷ್ಕಿಂದ ಆನೆಗುಂದಿಯಲ್ಲಿ ನಡೆಯಲಿರುವ ಹನುಮಾ ಮಾಲಾ ಕಾಯ೯ಕ್ರಮದ ನಿಮಿತ್ತ ಈ ಬೃಹತ್ ಸಂಕೀತ೯ನಾ ಮೆರವಣಿಗೆ ಆಯೋಜಿಸಲಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯದ ಬಜರಂಗದಳ ಕಾರ್ಯಕರ್ತರು ಯುವಕರು ಹೆಚ್ಚಿನ ಸಂಖ್ಯೆ ಯಲ್ಲಿ ಹಂಪಿಗೆ ಆಗಮಿಸಿ, ಶೃದ್ಧಾ,ಭಕ್ತಿ ಜೊತೆಗೆ ಹನುಮ ಮಾಲಾಧಾರಣೆ ಮಾಡಿ ವೃತಾಚರಣೆ ಮಾಡುವ ಮೂಲಕ ಕಾರ್ಯ ಕರ್ತರು ಇನ್ನಷ್ಟು ಸಂಸ್ಕಾರಯುತ ಗೊಳಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹ ಸಂಯೋಜಕ ಬಸವರಾಜ ಸುಗೂರ, ಅಂಬರೀಶ್ ಸುಲೇಗಾಂವ್, ಶ್ರೀಮಂತ ನವಲದಿ,ಅಶ್ವಿನಕುಮಾರ್ ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.