ಚಿಂತಾಮಣಿ : ತಾಲ್ಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಕಲ್ಕಿ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ದಲ್ಲಿ ವೈಕುಂಠ ಏಕಾದಶಿ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ಉತ್ಸವ ವಿಗ್ರಹಕ್ಕೆ ಏಕಾದಶಿಯಂದು ವಿಶೇಷವಾಗಿ ಸೂರ್ಯಪ್ರಭಾ ವಾಹನದಲ್ಲಿ ವೇಣುಗೋಪಾಲ ಸ್ವಾಮಿಯ ವಿಶ್ವರೂಪದರ್ಶನ ಅಲಂಕಾರವನ್ನು ಮಾಡಲಾಗಿತ್ತು.
ಬೆಳಿಗ್ಗೆ ಘಂಟಾನಾದದೊಂದಿಗೆ ಪೂಜೆಗಳು ಆರಂಭವಾದವು. ನಂತರ ಸುಪ್ರಭಾತ, ಗೋಪೂಜೆಯನ್ನು ಶಾಸ್ತ್ರೋಕ್ತ ವಾಗಿ ನಡೆಸಲಾಯಿತು. ನಂತರ ಗರುಡಾಳ್ವಾರ್ ಪೂಜೆಯನ್ನು ನೆರವೇರಿಸಿ ವೈಕುಂಠದ್ವಾರ ಪೂಜೆಯೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾದವು.

ಶ್ರೀಲಕ್ಷ್ಮೀವೆಂಕಟರಮಣಸ್ವಾಮಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕವನ್ನು ಸಮರ್ಪಿಸಿ ವಿಶೇಷವಾಗಿ ಪುಷ್ಪಾಲಂಕಾರ ಮಾಡಿದ್ದರು.
ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದಲ್ಲಿ ದೇವಾಲಯವನ್ನು ಪ್ರವೇಶ ಮಾಡುವುದು ವಿಶೇಷವಾಗಿರುವು ದರಿಂದ ವೈಕುಂಠ ದ್ವಾರದ ಬಳಿ ಭಕ್ತರು ಸರದಿಯಂತೆ ನಿಂತು ಸ್ವಾಮಿಯ ವಿಶ್ವರೂಪದರ್ಶನ ಭಾಗ್ಯವನ್ನು ಪಡೆದರು.
ಶ್ರೀಯೋಗಿನಾರೇಯಣ ಮಠದ ವತಿಯಿಂದ ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನವನ್ನು ಮಾಡಿದರು. ಹಲವಾರು ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇವಾಲಯವನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಮ್ಮನವರ ದೇವಾಲಯ ದಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಅಮ್ಮನವರಿಗೆ ವಿಶೇಷವಾಗಿ ಅಲಂಕಾರ ಸಹ ಮಾಡಲಾಗಿತ್ತು.
ಈ ವೇಳೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿಗಳು ಬೆಳಗಿನ ಪ್ರಥಮ ಪೂಜೆಯಲ್ಲಿ ಭಾಗವಹಿಸಿದ್ದರು. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಶನಿವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಬೆಳಿಗ್ಗೆ ೬ ಗಂಟೆಗೆ ಸಂಕೀರ್ತನೆಯೊAದಿಗೆ ಗರುಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.