Saturday, 10th May 2025

Vaikuntha Ekadashi: ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ: ದೇವಾಲಯಗಳಿಗೆ ಭಕ್ತರ ದಂಡು

ಬಾಗೇಪಲ್ಲಿ: ತಾಲೂಕಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ವಿಶೇಷ ಪೂಜೆ ,  ಹೂವಿನ ಅಲಂಕಾರ ಮಾಡಲಾಗಿತ್ತು.

ಪಟ್ಟಣದ ಹೊರವಲಯದ ಭೂನೀಳಾ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆ ಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದೇವರ ದರ್ಶನ ಪಡೆದು ತದನಂತರ ಮಾತನಾಡಿ ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಈ  ಪುಣ್ಯ ದಿನದಂದು ನಾಡಿನ ಸಮಸ್ತ ರೈತರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಹಾಗೂ ಜನತಗೆ ಎಲ್ಲರ ಇಷ್ಟಾರ್ಥಗಳು ಈಡೇರಲಿ. ನಾಡಿಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಚನ್ನಾಗಿ ಆಗಲಿ, ಸುಖ, ಶಾಂತಿ,ಸಮೃದ್ಧಿ, ನೆಮ್ಮದಿ ನೆಲೆಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೆನೆ ಹಾಗೂ ಸದಾ ಆ ವೈಕುಂಠವಾಸನ ಸ್ಮರಣೆ ಮಾಡುತ್ತಾ ಪುನೀತರಾಗೋಣ ಎಂದು ಹೇಳಿದರು.

ದೇವಾಲಯದ ಪ್ರಧಾನ ಅರ್ಚಕ ಅಶ್ವಥ ಸ್ವಾಮಿ ಮಾತನಾಡಿ ಏಕಾದಶಿ ವ್ರತವನ್ನು ಯಾರು ಭಕ್ತಿಯಿಂದ ಆಚರಿಸು ತ್ತಾರೋ ಅವರ ಎಲ್ಲಾ ಕಷ್ಟಗಳು ಹಾಗೂ ಸಮಸ್ಯೆಗಳನ್ನು ವಿಷ್ಣು ಪರಿಹಾರ ಮಾಡುತ್ತಾನೆ. ಅದರಲ್ಲೂ ವೈಕುಂಠ ಏಕಾದಶಿ ಸಮಯದಲ್ಲಿ ವಿಷ್ಣುವಿನ ನೆಲೆಯಾದ ವೈಕುಂಠದ ದ್ವಾರಗಳು ತೆರೆಯುತ್ತದೆ. ಈ ವಿಶೇಷ ದಿನದಂದು ವಿಷ್ಣು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ದೇಗುಲಕ್ಕೆ ಬಂದ ಭಕ್ತರಿಗೆ ಲಡ್ಡು ಹಾಗೂ ಪ್ರಸಾದ ವಿತರಣೆ ನಡೆಯುತ್ತಿದ್ದು, ಇಂದು ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ ಹಾಗೂ ಬಾಗೇಪಲ್ಲಿ ಪೋಲಿಸ್ ಠಾಣೆಯ ಆರಕ್ಷಕ ವೃತ್ತಿ ನಿರೀಕ್ಷಕ ಪ್ರಶಾಂತ್ ಕೆ.ವರ್ಣಿ ನೇತೃತ್ವ ದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Vaikuntha Ekadashi: ವೈಕುಂಠ ಏಕಾದಶಿ ದೇವಾಲಯಗಳಲ್ಲಿ ಹರಿದು ಬಂದ ಜನಸಾಗರ

Leave a Reply

Your email address will not be published. Required fields are marked *