Sunday, 11th May 2025

V Somanna: ನಾಗಮಂಗಲ ಪ್ರಕರಣ ಸಂಬಂಧ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ- ಸಚಿವ ಸೋಮಣ್ಣ

ತುಮಕೂರು : ಗಣೇಶನನ್ನು ಬಿಡಲು ಅಡ್ಡಿಪಡಿಸುವವರ ವಿರುದ್ಧ ಎಫ್ ಐಅರ್ ದಾಖಲಿಸಿದರೆ ಸಾಲದು ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ (Railway MInister V Somanna)ಹೇಳಿದರು.

ನಾಗಮಂಗಲ ಗಲಭೆ(Nagamangala Incident) ಯಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆ(PFI) ಭಾಗಿಯಾಗಿದೆ ಎಂಬ ವಿಚಾರ‌ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾನ್ ಮಾಡಿದರೂ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದಾರೆ. ಗಣೇಶನನ್ನು ಬಿಡಲು ಅಡ್ಡಿ ಪಡಿಸುತ್ತಾರೆ ಎಂದರೆ ಏನು ಹೇಳಬೇಕು, ಇಂತವರ ವಿರುದ್ಧ ಬರಿ ಎಫ್ ಐ ಆರ್ ಆದರೆ ಸಾಕಾಗಲ್ಲ. ಕಠಿಣವಾದ ಶಿಕ್ಷೆಯಾಗಬೇಕು ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದು ನುಡಿದರು.

2023ರಲ್ಲಿ ಇದೇ ತರಹ ಘಟನೆ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ, ಇದರ ಉದ್ದೇಶ ಏನೆಂದರೆ ಪ್ರತಿಕಾರ. ಬಿಜೆಪಿ ಸರ್ಕಾರ ಇದ್ದಾಗ ಉಸಿರೆತ್ತಲ್ಲ . ಕಾಂಗ್ರೆಸ್ ಬಂದಾಗ ಯಾಕೆ ಆಗುತ್ತದೆ. ಗೃಹ ಸಚಿವ ಪರಮೇಶ್ವರ್ ಒಬ್ಬ ದಕ್ಷ ಅನುಭವಿ ರಾಜಕಾರಣಿಯಾಗಿದ್ದು ಅವರು ನಿಯಂತ್ರಣ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿನ ಹಣ ಭಾಗ್ಯಗಳಿಗೆ ಬಳಸಬೇಡಿ

ಹಾಲಿನ ದರ ಹೆಚ್ಚಳ ಮಾಡಿ ನೂರಕ್ಕೆ ನೂರು ಪರ್ಸೆಂಟ್ ರೈತರಿಗೆ ಕೊಡುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ರೈತರ ಹೆಸರಲ್ಲಿ ಇನ್ನೆನೋ ಮಾಡಿಕೊಂಡು ಅದನ್ನು ಭಾಗ್ಯಗಳಿಗೆ ಉಪಯೋಗಿಸಿ ಕೊಳ್ಳುವುದಾದರೆ ಅದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದಕ್ಕೆ ಆಗುತ್ತಿಲ್ಲ. ಏನೋ ಒಂದು ಹೇಳುತ್ತಾರೆ ಅದನ್ನು ಸರಿ ಮಾಡಿ ಕೊಳ್ಳುವುದರಲ್ಲಿ ಇನ್ನೊಂದು ಶುರುವಾಗುತ್ತದೆ. ಸಿದ್ದರಾಮಯ್ಯ ಅನುಭವ ಐದು ವರ್ಷದಲ್ಲಿ ಯಾವ ರೀತಿ ಬಳಕೆ ಆಯಿತೋ ಮುಂದೇ ಅದೇ ತರಹ ಆಗಬೇಕು. ಒಂದೂವರೆ ವರ್ಷದಲ್ಲಿ ಸರ್ಕಾರ ಎಲ್ಲಿದೆ ಅಂತ ಹುಡುಕಾಡುವ ಹಾಗೆ ಆಗಿದೆ ಎಂದರು. ಅವತ್ತಿನ ಸಿದ್ದರಾಮಯ್ಯನೇ ಬೇರೆ ಇವತ್ತಿನ ಸಿದ್ದರಾಮಯ್ಯ ನೇ ಬೇರೆ ಎಂದು ವ್ಯಂಗ್ಯ ವಾಡಿದರು.

ಸ್ವಚ್ಚತಾ ಆಂದೊಲನದಲ್ಲಿ 60% ನಾವು ಕೊಡುತ್ತೇವೆ, 40% ನೀವು ಕೊಡುತ್ತೀರಾ. ಕೇಂದ್ರ ಸರ್ಕಾರ ಒಂದೇ ಒಂದು ಅನುದಾನ ನಿಲ್ಲಿಸಿಲ್ಲ. ಎಲ್ಲೋ ಒಂದು ಎರಡು ಕಡೆ ತೊಂದರೆಯಾಗಿದೆ. ನಾನು ಕೇಂದ್ರದ ಮಂತ್ರಿಯಾಗಿ ಆತ್ಮೀಯ ನಾಗಿ ವಿನಂತಿ ಮಾಡುತ್ತೇನೆ. ದಯವಿಟ್ಟು ವಾಸ್ತವಾಂಶಗಳನ್ನು ಹೇಳಿ, ನಿಜಾಂಶಗಳನ್ನು ತಿಳಿಸಿ ಎಂದರು.

ಇದನ್ನೂ ಓದಿ: V Somanna: ಹಲವು ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸೋಮಣ್ಣ ಮುಂದೆ ಬೇಡಿಕೆ ಇಟ್ಟ ಎಂ.ಬಿ.ಪಾಟೀಲ್‌

Leave a Reply

Your email address will not be published. Required fields are marked *