Sunday, 11th May 2025

ಪಣಂಬೂರು ಬೀಚ್’ನಲ್ಲಿ ಮುಳುಗಿ ಇಬ್ಬರ ಸಾವು

ಮಂಗಳೂರು: ಪಣಂಬೂರು ಬೀಚ್ ನಲ್ಲಿ ಸೋಮವಾರ ಸಮುದ್ರದಲ್ಲಿ ಈಜಾಟ ವಾಡುತ್ತಿದ್ದ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ(45) ಮತ್ತು ನಿಂಗಪ್ಪ(60) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ಹಲಸಿನ ಮೇಳದಲ್ಲಿ ಭಾಗವಹಿಸಲೆಂದು ದಿವಾಕರ ಆರಾಧ್ಯ, ನಿಂಗಪ್ಪ, ಅವಿನಾಶ್ ಸೇರಿದಂತೆ ನಾಲ್ವರು ಆಗಮಿಸಿದ್ದರು. ಬೆಳಗ್ಗೆ ನಾಲ್ವರು ಪಣಂಬೂರು ಬೀಚ್ ಗೆ ತೆರಳಿ, ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿದ ದಿವಾಕರ ಆರಾಧ್ಯ ಮತ್ತು ನಿಂಗಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟ ರೆನ್ನಲಾಗಿದೆ.

ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.