Sunday, 11th May 2025

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಇನ್ನಿಬ್ಬರ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತಿಬ್ಬರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಾರೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಬಿದ್(22), ನೌಫಾಲ್ (28) ಅವರನ್ನು ಬಂಧಿಸಿದ್ದಾರೆ.

ಬೆಳ್ಳಾರೆಯ ಗೌರಿ ಹೊಳೆ ನಿವಾಸಿ ಮೊಹಮ್ಮದ್ ಅವರ ಮಗ ನೌಫಾಲ್, ನಾವೂರು ನಿವಾಸಿ ಯಾಕೂಬ್ ಪುತ್ರ ಅಬಿದ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿದೆ.

ಈ ಹಿಂದೆ ಶಫೀಕ್, ಜಾಕೀರ್, ಸದ್ದಾಂ, ಹ್ಯಾರಿಸ್ ಅವರನ್ನು ಬಂಧಿಸ ಲಾಗಿತ್ತು. ಈಗ ಮತ್ತಿಬ್ಬರು ಆರೋಪಿಗಳ ಬಂಧನ ದೊಂದಿಗೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳ ಬಂಧನ ವಾಗಿದೆ.