Thursday, 15th May 2025

ದೇಶದ 100 ವಿವಿಗಳಲ್ಲಿ ತುಮಕೂರು ವಿವಿಗೆ ಸ್ಥಾನ

ತುಮಕೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ದೇಶದ ಮೊದಲ ಟಾಪ್ 100 ವಿವಿಗಳಲ್ಲಿ ಸ್ಥಾನ ಪಡೆದಿದೆ.

ಕಳೆದ ಒಂದು ವರ್ಷದಲ್ಲಿ ಸಂಶೋಧನಾ ಧನ ಸಹಾಯ ಸಂಸ್ಥೆಗಳಿಗೆ 80 ಸಂಶೋಧನಾ ಪ್ರಸ್ತಾವನೆಗಳನ್ನು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸಲ್ಲಿಸಿದ್ದರು. ಅದರಲ್ಲಿ, 22 ಸಂಶೋಧನಾ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದ್ದು, 1.5 ಕೋಟಿಯಷ್ಟು ಧನ ಸಹಾಯದ ಮಾನ್ಯತೆ ದೊರೆತಿರುವುದು ವಿವಿಯ ಸಂಶೋಧನಾ ಗುಣಮಟ್ಟಕ್ಕೆ ನಿದರ್ಶನವಾಗಿದೆ.

ಈ ಕುರಿತು ಮಾತನಾಡಿದ ಕುಲಪತಿ ಪ್ರೊ. ವೆಂಕಟೇಶ್ವರಲು, ಸಂಶೋಧನಾಧಾರಿತ ಶಿಕ್ಷಣದಿಂದ ವಿವಿಯ ಗುಣಮಟ್ಟ ಎತ್ತರಕ್ಕೆ ಏರಿದೆ. ದೇಶದ ಟಾಪ್ 100 ವಿವಿ ಗಳಲ್ಲಿ ಸ್ಥಾನ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಈ ಮಹಾತ್ಸಾಧನೆಗೆ ಕಾರಣೀಭೂತರಾದ ಸಮಸ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಗೂ, ಸಿಬ್ಬಂದಿ ವರ್ಗದವರಿಗೂ, ಆಡಳಿತ ಮಂಡಳಿಗೂ ಅಭಿನಂದನೆಯನ್ನು ತಿಳಿಸಿದರು.

ತುಮಕೂರು ವಿವಿ ಉತ್ತಮ ಸಾಧನೆ ಮಾಡಿರುವುದಕ್ಕೆ ಹಲವು ಸಂಘಟನೆಗಳ ವತಿಯಿಂದ, ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲ ಸಚಿವರಾದ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲ ಸಚಿವ ಪ್ರೊ. ಪ್ರಸನ್ನ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾ ಕುಮಾರ್, ಜಿಲ್ಲಾ ವಕ್ ಬೋರ್ಡಿನ ಉಪಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಎಸ್ ರಾಮಚಂದ್ರ ರಾವ್, ಮುಖಂಡರುಗಳಾದ ಎನ್ ವೆಂಕಟೇಶ ಆಚಾರ್, ಕೋಮಲ ವೀರಭದ್ರಯ್ಯ, ರಫೀಕ್ ಅಹಮದ್, ರಾಮಣ್ಣ, ಮಮತಾ ಶಿವಕುಮಾರ್, ದಾನೇಶ್ವರಿ,ನಳಿನ, ಆದಿಲ್ ಭಾಷಾ, ಪ್ರೇಮ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *