Sunday, 11th May 2025

Tumkur News: ಡಿ.14 ದತ್ತಮಾಲಾ ಅಭಿಯಾನ

ಚಿಕ್ಕನಾಯಕನಹಳ್ಳಿ : ದತ್ತ ಜಯಂತಿ ಅಂಗವಾಗಿ ಡಿ.14ರಂದು ವಿಶ್ವ ಹಿಂದು ಪರಿಷತ್ ಹಾಗು ಭಜರಂಗದಳದಿAದ ನಗರದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಲ್ಲಿ ದತ್ತಮಾಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಂಜಾನೆ ೬ ಗಂಟೆಗೆ ಭಕ್ತರಿಗೆ ಮಾಲೆ ಧಾರಣೆ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ದತ್ತ ಭಕ್ತರು ವಾಹನಗಳಲ್ಲಿ ದತ್ತ ಪೀಠಕ್ಕೆ ತೆರಳುವರು.

ದತ್ತ ಪೀಠದಲ್ಲಿ ಸಂಗಮವಾಗುವ ದತ್ತ ಭಕ್ತರು ಅಲ್ಲಿ ಜರುಗುವ ಹೋಮಹವನಗಳಲ್ಲಿ ಪಾಲ್ಗೊಂಡು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.