Sunday, 11th May 2025

Tumkur News: ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು: ಭವಿಷ್ಯ 

ತುಮಕೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು‌ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಚಿನಗ ಗ್ರಾಮದಲ್ಲಿರುವ ಶ್ರೀ ಮೂಕಾಂಬಿಕಾ ಹಾಗೂ ಸುಬ್ರಹ್ಮಣ್ಯ ಕ್ಷೇತ್ರದ ಧರ್ಮದರ್ಶಿ ಡಾ. ಲಕ್ಷ್ಮಿಕಾಂತ್ ಆಚಾರ್ಯ ಅವರು ಉಪಚುನಾವಣೆ ಬಗ್ಗೆ ಫಲಿತಾಂಶಕ್ಕೆ ಮುನ್ನವೇ ಭವಿಷ್ಯ ತಿಳಿಸಿದ್ದಾರೆ.

ಶ್ರೀ ಮೂಕಾಂಬಿಕಾ ದೇವಿಯ ಅನುಗ್ರಹದಂತೆ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜಯಗಳಿಸುತ್ತಾರೆ. ಮತದಾನಕ್ಕೂ ಮುನ್ನವೇ ಭವಿಷ್ಯ ನುಡಿಯಲಾಗಿತ್ತು, ಮತದಾನದ ನಂತರವೂ ಭವಿಷ್ಯ ಸ್ಪಷ್ಟವಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಿ ದ್ದಾರೆ.

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಬಗ್ಗೆ ಜ್ಯೋತಿಷಿ ಡಾ. ಲಕ್ಷ್ಮಿಕಾಂತ್ ಆಚಾರ್ಯ ಅವರು ಹೇಳಿದ್ದ ಭವಿಷ್ಯ ನಿಜವಾಗಿದ್ದು ಭಾರಿ ವೈರಲ್ ಆಗಿದೆ.