ಆರ್.ಉಗ್ರೇಶ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಜ. ೧ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ
ಶಿರಾ: ಜೆಡಿಎಸ್ ಪಕ್ಷದ ರಾಜ್ಯ ಪರಿಷತ್ ಸದಸ್ಯರು ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಮುಖಂಡರಾದ ಆರ್.ಉಗ್ರೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರ್.ಉಗ್ರೇಶ್ ಅಭಿಮಾನಿ ಬಳಗದ ವತಿಯಿಂದ ಜ. ೧ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ತಾಲೂಕಿನ ಜನತೆ ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಮಾಜಿ ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಆರ್.ಉಗ್ರೇಶ್ ಅಭಿಮಾನಿ ಬಳಗದಿಂದ ಪಕ್ಷಾತೀತವಾಗಿ ಆರ್.ಉಗ್ರೇಶ್ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಪ್ರದೀಪ್ ಕುಮಾರ್ ಮಾತನಾಡಿ ಆರ್.ಉಗ್ರೇಶ್ ಅವರ ಅಭಿಮಾನಿಗಳು ತಾಲೂಕಿನ ಜನತೆ ಆರೋಗ್ಯದ ಹಿತದೃಷ್ಟಿಯಿಂದ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದಾರೆ. ನಮ್ಮ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಿಂದ ನುರಿತ ವೈದ್ಯರುಗಳ ತಂಡ ಭಾಗವಹಿಸಲಿದ್ದು, ಶಿಬಿರದಲ್ಲಿ ಹೃದಯರೋಗ ಸಂಬAಧಿ ತೊಂದರೆ, ಸಾಮಾನ್ಯ ರೋಗಗಳಾದ ಇ.ಎನ್.ಟಿ., ಸ್ತಿçÃರೋಗ, ಹೃದಯ ರೋಗ, ಕೀಲು ಮತ್ತು ಮೂಳೆ ರೋಗ, ಮಕ್ಕಳ ತಜ್ಞರು, ಜನರಲ್ ಮೆಡಿಸಿನ್, ನವಜಾತ ಶಿಶುವಿನ ಚಿಕಿತ್ಸೆ, ಶ್ವಾಸಕೋಶ ಚಿಕಿತ್ಸೆ, ಕಣ್ಣಿನ ತೊಂದರೆ ಇರುವವರು ಚಿಕಿತ್ಸೆ ಪಡೆಯಬಹುದು, ಈ ಶಿಬಿರದಲ್ಲಿ ಚಿಕಿತ್ಸೆ ಪಡೆಯುವವರಿಗೆ ಶ್ರೀದೇವಿ ಆರೋಗ್ಯ ಗುರುತಿನ ಚೀಟಿ ವಿತರಿಸ ಲಾಗುವುದು.
ಈ ಗುರುತಿನ ಚೀಟಿ ಪಡೆದವರು ಒಂದು ವರ್ಷದೊಳಗೆ ಆರೋಗ್ಯ ಸಮಸ್ಯೆ ಇದ್ದರೆ ಮತ್ತೊಮ್ಮೆ ಬಂದು ಉಚಿತ ಚಿಕಿತ್ಸೆ ಪಡೆಯಬಹುದು. ಶಿಬಿರಕ್ಕೆ ಆಗಮಿಸುವವರು ಆಧಾರ್ ಕಾರ್ಡ್ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಚುನಾವಣಾ ಗುರುತಿನ ಚೀಟಿ ಜೆರಾಕ್ಸ್ ತರಬೇಕು. ಶಿರಾ ತಾಲೂಕಿನ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಜೆಡಿಎಸ್ ಅಧ್ಯಕ್ಷ ಶ್ರೀರಂಗ, ಮುಖಂಡರಾದ ಮಾನಂಗಿ ರಾಮು, ಎಸ್.ಎಸ್.ನಾಗ ಭೂಷಣ್, ನಿಸರ್ಗ ಸುರೇಶ್, ಭೂವನಹಳ್ಳಿ ನಟರಾಜು, ಪುಟ್ಟಣ್ಣ ಸೇರಿದಂತೆ ಹಲವರು ಹಾಜರಿದ್ದರು.