ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಇಡಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಡಗೂರಿನ ಜಿ.ಯತೀಶ್ (ಛೇರ್ಮನ್ ರವಿ) ಹಾಗೂ ಉಪಾಧ್ಯಕ್ಷರಾಗಿ ಎಚ್.ಡಿ.ಶ್ರೀನಿವಾಸ್ ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಯತೀಶ್ ಮಾತನಾಡಿ ರೈತರ ಕೃಷಿ ಅನುಕೂಲಕ್ಕೆ ತಕ್ಕಂತೆ ಸೊಸೈಟಿ ಕೆಲಸ ಮಾಡುತ್ತಿದೆ. ರೈತರ ಅಭಿವೃದ್ಧಿಗೆ ಪೂರಕ ಯೋಜನೆ ಹಾಗೂ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು ಆರ್ಥಿಕ ವಹಿವಾಟು ಸಹ ನಡೆಸಿದೆ. ಕೃಷಿ ಪರಿಕರ ಖರೀದಿ ಹಾಗೂ ಕೃಷಿ ಸಾಲ ನೀಡುತ್ತಾ ಇಡಗೂರು ಸುತ್ತಲಿನ ರೈತರ ನೆರವಿಗೆ ನಿಂತ ಈ ಸಂಘವನ್ನು ಉತ್ತಮ ಬ್ಯಾಂಕ್ ಆಗಿ ಮೇಲ್ದರ್ಜೆಗೇರಿಸುವ ಆಲೋಚನೆ ಇದೆ. ಎಲ್ಲಾ ಸದಸ್ಯರ ಒಮ್ಮತದಲ್ಲಿ ಸಂಘ ಅಭಿವೃದ್ದಿ ಪಡಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ದರು.
ಸಂಘದ ಸದಸ್ಯರಾದ ಪ್ರಶಾಂತ್, ನರಸಿಂಹಮೂರ್ತಿ, ಮನೋಹರ್, ಶಿವಕುಮಾರ್, ಉಮಾ, ಅನುಸೂಯ, ದೇವರಾಜ್, ಐ.ಎನ್.ಮನೋಹರ್, ಗಫಾರ್, ರಮೇಶ್ ಸೇರಿದಂತೆ ಹಲವು ಮುಖಂಡರು ಇದ್ದರು.
ಇದನ್ನೂ ಓದಿ: #TumkurBreaking