ಶಿರಾ: ಶಿರಾ ನಗರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಹಣ ದಿವಸದ ಅಂಗವಾಗಿ ನಗರದ ಸ್ಮಶಾನ ದಲ್ಲಿ ವೈಚಾರಿಕ ಚಿಂತನೆಯ ಕಾರ್ಯಕ್ರಮವನ್ನು ಮಾನವ ಬಂದುತ್ವ ವೇದಿಕೆ ಕರ್ನಾಟಕ ಹಾಗೂ ಮಹಿಳಾ ಬಂದುತ್ವ ವೇದಿಕೆ ವತಿಯಿಂದ ಏರ್ಪಡಿಸಲಾಗಿತ್ತು.

ನಂತರ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ಮುಂದೆ ಕ್ಯಾಂಡಲ್ ಹಚ್ಚುವುದರ ಬಗ್ಗೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಧರಣಿ ಕುಮಾರ್, ಮಹಿಳಾ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಜಯಲಕ್ಷ್ಮೀ, ತಾಲೂಕು ಸಂಚಾಲನಾ ಸಮಿತಿಯ ಸಂಚಾಲಕರಾದ ರಂಗರಾಜು ಎಸ್, ಮಹಿಳಾ ಬಂದುತ್ವ ವೇದಿಕೆಯ ತಾಲೂಕು ಸಂಚಾಲಕರಾದ ಶಿವಮ್ಮ ಎಲಿಯೂರು, ಸಾಹಿತಿ ರಮೇಶ್, ಕರವೇ ಬಾಬು ಸೇರಿದಂತೆ ಹಲವರು ಹಾಜರಿದ್ದರು.