ಚಿಕ್ಕನಾಯಕನಹಳ್ಳಿ : ಮುದ್ದೇನಹಳ್ಳಿ ಗ್ರಾ.ಪಂ.ನ ಮುದ್ದೇನಹಳ್ಳಿ, ಕ್ಯಾತನಾಯಕನಹಳ್ಳಿ, ಎಂ.ಹೆಚ್.ಕಾವಲು, ಸಾಲ್ಕಟ್ಟೆ, ಲಕ್ಮೇನಹಳ್ಳಿ, ಮಾಳಿಗೆಹಳ್ಳಿ, ಸಾವಶೆಟ್ಟಿಹಳ್ಳಿ, ಜೋಡಿ ಕಲ್ಲೇನಹಳ್ಳಿ, ಆಲದಕಟ್ಟೆ ಗ್ರಾಮಗಳಲ್ಲಿ ವಾರ್ಡ್ಸಭೆ ಶುಕ್ರವಾರ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಗಂಗಾಧರಯ್ಯ ನರೇಗ ಅರ್ಜಿ ಪಡೆಯುವುದು, ಕುರಿ, ಕೋಳಿ, ಜಾನುವಾರು ಶೆಡ್ ನಿರ್ಮಾಣದ ಅರ್ಜಿ ಸ್ವೀಕರಿಸುವುದು, ಇನ್ನಿತರ ಕೆಲಸ ಕಾರ್ಯಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅನುದಾನ ನೋಡಿಕೊಂಡು ಅವಶ್ಯವಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಗ್ರಾಮಸ್ಥರು ತೆರಿಗೆಯನ್ನು ಕಟ್ಟಬೇಕು. ತೆರಿಗೆ ಸಂಗ್ರಹದಿಂದ ಹೆಚ್ಚುವರಿ ಕೆಲಸ ನಿರ್ವಹಿಸಲು ಸಾಧ್ಯ. ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಸಾಲಿನಲ್ಲಿ ವೈಯಕ್ತಿಕ ಹಾಗು ಸಮುದಾಯ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದರು. ಪಿಡಿಓ ಶಿವಕುಮಾರ್ ಮಾತನಾಡಿ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳ್ಳುವ ಆರ್ಥಿಕ, ಸಾಮಾಜಿಕ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಸರಕಾರದ ಎಲ್ಲಾ ಹಂತದ ಯೋಜನೆಗಳನ್ನು ಅನುಷ್ಠಾನ ತರುವಲ್ಲಿ ಗ್ರಾಮದ ಎಲ್ಲಾ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: #TumkurBreaking