
ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತುಮಕೂರು ಗ್ರಾಮಾಂತರ ಕಸಬಾ ಪಶ್ಚಿಮ ಹೋಬಳಿಯ ಮಲ್ಲಸಂದ್ರ, ಊರ್ಡಿಗೆರೆ ಹೋಬಳಿ ಜಾಸ್ ಟೋಲ್ ಕ್ಯಾತ್ಸಂದ್ರ ಹಾಗೂ ಕುರುವಲು, ಗೂಳೂರು ಹೋಬಳಿ ಹೊನ್ನುಡಿಕೆ ಹಾಗೂ ಬೆಳ್ಳಾವಿ ಹೋಬಳಿ ದೊಡ್ಡವೀರನಹಳ್ಳಿ ಸೇರಿ ೧,೦೨,೦೭೪ ಪುರುಷರು, ೧,೦೪,೦೨೩ ಮಹಿಳೆಯರು ಹಾಗೂ ೧೮ ಇತರೆ ಸೇರಿದಂತೆ ಒಟ್ಟು ೨,೦೬,೧೫೫ ಮತದಾ ರರಿದ್ದು ಯಾವುದೇ ಅಕ್ರಮ ಹಣ ಸಾಗಾಣಿಕೆ, ಮದ್ಯ ಸಾಗಾಣಿಕೆ, ಮತ್ತಿತರ ವಸ್ತುಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಡಿವೈಎಸ್‌ಪಿ ಎಚ್. ಶ್ರೀನಿವಾಸ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನ ಮಾರ್ಚ್ ೧೦ ರಿಂದ ದಾಖಲೆ ಇಲ್ಲದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ನಗದು, ಗಾಂಜಾ, ಮದ್ಯ ಸೇರಿದಂತೆ ಇತರೆ ವಸ್ತುಗ ಳನ್ನು ವಶಪಡಿಸಿಕೊಳ್ಳಲಾಗಿದ್ದು, ೨ ದಿನಗಳ ಹಿಂದೆ ಯಲ್ಲಾಪುರ ಚೆಕ್ ಪೋಸ್ಟ್ ನಲ್ಲಿ ೧೧೨ ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೩೧,೪೦೯ ರೂ. ಮೌಲ್ಯದ ೬೮.೮೫೦ ಲೀಟರ್ ಮದ್ಯ, ಹೆಬ್ಬೂರಿನಲ್ಲಿ ೪,೯೫೦ ರೂ. ಮೌಲ್ಯದ ೧೫.೭೬೦ ಲೀಟರ್, ತುಮಕೂರು ಗ್ರಾಮಾಂತರದಲ್ಲಿ ೮೭೨೮ ರೂ. ಮೌಲ್ಯದ ೧೬.೯೨೦ ಲೀಟರ್, ಬೆಳ್ಳಾವಿಯಲ್ಲಿ ೩೮೬.೪೩ ರೂ. ಮೌಲ್ಯದ ೯೯೦ ಮಿ.ಲೀ., ತಿಲಕ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ೩,೧೨೬ ರೂ. ಮೌಲ್ಯದ ೮.೧೦ಲೀಟರ್ ಮದ್ಯ ಹಾಗೂ ಹೆಬ್ಬೂರಿನಲ್ಲಿ ೬೫,೦೦೦ ರೂ. ಮೌಲ್ಯದ ೨.೨೩೫ ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ಪಿ.ಓಂಕಾರಪ್ಪ, ಕ್ಯಾತ್ಸಂದ್ರ ಸರ್ಕಲ್ ಇನ್ಸ್ಪೆಕ್ಟರ್ ಚೆನ್ನೇಗೌಡ ಉಪಸ್ಥಿತರಿದ್ದರು.
ಸುದ್ದಿಗೋಷ್ಟಿಯಲ್ಲಿ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಮಾತನಾಡಿದರು.