Wednesday, 14th May 2025

ಸ್ವಾಭಿಮಾನ ಗೆಲ್ಲುವ ವಿಶ್ವಾಸವಿದೆ: ಸೊಗಡು

ತುಮಕೂರು : ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಮೋಸ ಮಾಡಿದ್ದರಿಂದ ಸ್ವತಂತ್ರವಾಗಿ ಕಣಕ್ಕಿಳಿಯು ತ್ತಿದ್ದೇನೆ. ತುಮಕೂರು ನಗರದ ಮತ ಬಾಂಧವರು ಸ್ವಾಭಿಮಾನವನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ತಿಳಿಸಿದರು.
ಸಹಸ್ರಾರು ಬೆಂಬಲಿಗರ ನಡುವೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು,  ಕಣದಿಂದ ಹಿಂದೆ ಸರಿಯುವ ಮಾತೇ ಯಿಲ್ಲ. ಹಿತೈಷಿಗಳ ಒತ್ತಾಯದಂತೆ ಸ್ವತಂತ್ರವಾಗಿ ಸ್ಪರ್ಧಿಸಿದ್ದೇನೆ. ಭ್ರಷ್ಟಚಾರವನ್ನು ನೋಡಿ ಸಾಕಾಗಿರುವ ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ ಎಂದರು.
ಜೆಡಿಎಸ್ ಕಾರ್ಯಕರ್ತರ ಜೈ ಘೋಷ:  ನಗರದ ಲಕ್ಕಪ್ಪ ವೃತ್ತದಿಂದ  ಮಹಾನಗರ ಪಾಲಿಕೆವರೆಗೂ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆ ಬಂದ ಸೊಗಡು ಶಿವಣ್ಣ ಅವರು ನಾಮಪತ್ರ ಸಲ್ಲಿಸಿ ಹಿಂದಿರುಗುವಾಗ  ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿದ್ದು ವಿಶೇಷವಾಗಿತ್ತು. ನಿಮ್ಮಂತ ಸ್ವಾಭಿ ಮಾನಿಗಳು ಪಕ್ಷಕ್ಕೆ ಅಗತ್ಯವಾಗಿದೆ.
ಪಕ್ಷೇತರವಾಗಿ ಗೆದ್ದು ಜೆಡಿಎಸ್‌ಗೆ ಬನ್ನಿ ಎಂದು ಕೂಗಿದರು.