Sunday, 11th May 2025

ಜೆಡಿಎಸ್ ಭದ್ರಕೋಟೆ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ

ಗುಬ್ಬಿ: ಜೆಡಿಎಸ್ ಭದ್ರಕೋಟೆಯನ್ನು ಒಡೆಯಲು ಯಾರಿಂದಲೂ  ಸಾಧ್ಯವಿಲ್ಲ  ಎಂದು ಜೆಡಿಎಸ್ ಅಭ್ಯರ್ಥಿ ಬಿ ಎಸ್ ನಾಗರಾಜ್ ತಿಳಿಸಿದರು.

ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಮನೆಮನೆ ಪ್ರಚಾರ ಕೈಗೊಂಡು   ಮಾತನಾಡಿ  ಜನ ಬದಲಾವಣೆ ಬಯಸಿದ್ದು   ಕುತಂತ್ರದ ರಾಜಕಾರಣಕ್ಕೆ ಜನರು ಮಣಿಯುವುದಿಲ್ಲ ಸಾವಿ ರಾರು ಮಂದಿ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಜೊತೆಯಲ್ಲಿದ್ದಾರೆ.
ಪಂಚರತ್ನ ಯೋಜನೆಯ ಮೂಲಕ  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿಗೆ ಪೂರಕವಾದಂತ ಅಂಶಗಳನ್ನು ರೂಪಿಸಿದ್ದಾರೆ ಗ್ರಾಮ ವಾಸ್ತವ್ಯದ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿ ಯಾಗಿದೆ.
ನಿರುದ್ಯೋಗ, ಮಹಿಳಾ ಸಬಲೀಕರಣ, ಹೈಟೆಕ್ ಆಸ್ಪತ್ರೆ ಸೇರಿದಂತೆ  ರೈತರ ಏಳಿಗೆಗೆ  ಅನೇಕ ಯೋಜನೆಗಳು ಒಳಗೊಂಡಿವೆ   ಪ್ರತಿ ಗ್ರಾಮದಲ್ಲೂ ಯುವಕರು ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಅನೇಕ  ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು  ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸುವ ಮೂಲಕ ಈ ಬಾರಿ ನನಗೆ ಅವಕಾಶ ಮಾಡಿ ಕೊಡುವ ವಿಶ್ವಾಸವಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆರೋಪ ಪ್ರತ್ಯಾರೋಪ ಬಿಟ್ಟರೆ ಜನಜೀವನ ಸುಧಾರಿಸುವಲ್ಲಿ ವಿಫಲವಾಗಿವೆ. ರಾಜ್ಯದ ಅಭಿವೃದ್ಧಿ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ  ಮುಂದಿನ ದಿನಗಳಲ್ಲಿ ಕುಮಾರಣ್ಣನ ನೇತೃತ್ವದಲ್ಲಿ ಬಹುಮತದ ಮೂಲಕ ಜೆಡಿಎಸ್ ಸರ್ಕಾರ ರಚನೆಯಾಗಲಿದೆ  ಎಂದು ತಿಳಿಸಿದರು.