Sunday, 11th May 2025

ಈ ಬಾರಿ ಬಿಜೆಪಿ ಜಯಭೇರಿ ಸಾಧಿಸಲಿದೆ: ಜಿ ಎಸ್ ಬಸವರಾಜ್

ಗುಬ್ಬಿ: ತಾಲೂಕಿನಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಸಾಧಿಸಲಿದೆ ಎಂದು ಸಂಸದ ಜಿ ಎಸ್ ಬಸವರಾಜ್ ತಿಳಿಸಿದರು.

 ಪಟ್ಟಣದ  ಚನ್ನಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಹಸ್ರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ನರೇಂದ್ರ ಮೋದಿಯವರು ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತ ಉತ್ತಮ ಕಾರ್ಯ ಕ್ರಮಗಳನ್ನು ರೂಪಿಸಿದ್ದಾರೆ. ಅದರ ಫಲವಾಗಿ ರಾಜ್ಯದಲ್ಲಿ  ಬಿಜೆಪಿ ಸರ್ಕಾರ ರಚನೆ ಯಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಎಸ್ ಡಿ  ದಿಲೀಪ್ ಕುಮಾರ್ ಮಾತನಾಡಿ   ಪ್ರತಿ ಬೂತ್ ನ ಶಕ್ತಿ ಕೇಂದ್ರದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದ್ದಾರೆ. ಎಲ್ಲಾ ಕೋಮಿನ  ಮುಖಂಡರುಗಳು ಜಾತ್ಯತೀತವಾಗಿ ಬೆಂಬಲ ನೀಡು ತ್ತಿದ್ದಾರೆ. ನೀರಾವರಿ ಯೋಜನೆ ಹಾಗೂ ರೈತರ ಸೌಲಭ್ಯಗಳಿಗೆ  ನನ್ನ ಮೊದಲ ಆದ್ಯತೆಯಾಗಿದ್ದು. ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ತಾಲೂಕಿನಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ನಿರುದ್ಯೋಗ, ಸುಸಜ್ಜಿತ   ಆಸ್ಪತ್ರೆ ಕೊರತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಕೊರತೆ ನೀಗಿಸಲು ನನಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರ ಅವರು    ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದು ಯಾರಿಂದಾಗಿಯೂ  ಸಹ ಪಕ್ಷಕ್ಕೆ ನಷ್ಟ ಉಂಟಾಗುವುದಿಲ್ಲ.
ಸದೃಢವಾದಂತ ಪಕ್ಷವಾದ್ದರಿಂದ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇತ್ತು ಸರ್ವೆ ಮತ್ತು ಜನಾಭಿಪ್ರಾಯದ ಆಧಾರದ ಮೇಲೆ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ನಮ್ಮಲ್ಲಿ ಯಾವುದೇ ಆಂತರಿಕ ಕಲಹಗಳಿಲ್ಲ ಎಲ್ಲರೂ ಒಟ್ಟಾಗಿದ್ದೇವೆ ಬಿಜೆಪಿಯನ್ನು ಗೆಲ್ಲಿಸುವುದೇ  ಪ್ರತಿಯೊಬ್ಬ ಕಾರ್ಯ ಕರ್ತರ ಗುರಿಯಾಗಿದೆ ಎಂದರು.