Wednesday, 14th May 2025

ಭವಿಷ್ಯವನ್ನು ರೂಪಿಸಲು ವೈದ್ಯರ ವೃತ್ತಿ ಶ್ರೇಷ್ಠವಾಗಿದೆ: ಕುಲಪತಿ ಡಾ. ಎಂ.ಆರ್.ಜಯರಾಮ್

ತುಮಕೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಲು ವೈದ್ಯರ ವೃತ್ತಿ ಶ್ರೇಷ್ಠ ವಾಗಿದೆ ಎಂದು ಬೆಂಗಳೂರಿನ ರಾಮಯ್ಯ  ಸೈನ್ಸಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್.ಜಯರಾಮ್ ಹೇಳಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ವೈದ್ಯ ಪದವಿ ಪಡೆದಿರುವ ಐದನೇ ಬ್ಯಾಚ್‌ನ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅತಿಥಿ ದೇವೋಭವ ಎಂದು ಹೇಳುವ ಮೂಲಕ ಹೆತ್ತವರು, ಹಿರಿಯರು, ಗುರುಗಳು, ಅತಿಥಿಗಳನ್ನು ಗೌರವಿಸಬೇಕು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದು ಭಾರತೀಯ ಸಂಸ್ಕೃತಿ ಎಂದರು.
ನಿಮ್ಮಲ್ಲಿ ಬರುವ ರೋಗಿಗಳಲ್ಲಿ ದೇವರನ್ನು ಕಾಣಬೇಕು, ಉತ್ತಮ ಚಿಕಿತ್ಸೆ ನೀಡಬೇಕು. ವೈದ್ಯರು ಸಾರ್ವಜನಿಕರ ಆರೋಗ್ಯದಲ್ಲಿ ತೊಡಗಿಸಿಕೊಳ್ಳಬೇಕು. ವೈದ್ಯರ ಮಾತಿನಲ್ಲಿಯೇ ರೋಗಿಗೆ ಅರ್ಧ ಕಾಯಿಲೆಯನ್ನು ಗುಣಪಡಿಸಬೇಕು. ಉತ್ತಮ ಮನುಷ್ಯನಾಗಿ ಹೊರ ಹೊಮ್ಮಬೇಕು. ರೋಗಿಗಳಿಗೆ ನಗು ಮುಖ, ಕರುಣಿಯಿಂದ ಚಿಕಿತ್ಸೆ ನೀಡಿದ್ದಲ್ಲಿ ಅವರ ಪಾಲಿಗೆ ದೇವರರಾಗುತ್ತಿರಬೇಕು. ಮಾತೃ ಭಾಷೆಯಲ್ಲಿಯೇ ರೋಗಿಯ ಜೊತೆಯಲ್ಲಿ ವ್ಯವಹರಿಸಿದ್ದಲ್ಲಿ ಹೆಚ್ಚು ಅನುಕೂಲಕಾರವಾಗಿರುತ್ತದೆ. ಯುವ ವೈದ್ಯರು ಸಂವೇದನಾ ಶೀಲತೆ, ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ವೈದ್ಯ ಪದವಿ ಪಡೆದಿರುವ ೨೦೧೭ ನೇ ಐದನೇ ಬ್ಯಾಚ್‌ನ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸ್ವಾಗತಿಸಿ, ೧೨ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ, ೧೪೭ ವಿದ್ಯಾರ್ಥಿಗಳು ವೈದ್ಯಕೀಯ ಪದವಿಯನ್ನು ಪಡೆದಿರುವುದು ತುಂಬಾ ಹರ್ಷ ತಂದಿದೆ.
 ಪದವಿ ಪಡೆದ ವೈದ್ಯ ವಿದ್ಯಾರ್ಥಿಗಳು ಕಾಲೇಜುನ್ನು ಸ್ಮರಿಸಬೇಕು ಹಾಗೂ ಉನ್ನತ ವ್ಯಾಸಂಗ ಮಾಡಿ, ತಂದೆ, ತಾಯಿರಿಗೆ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು. ಈ ಸಂಸ್ಥೆಯಲ್ಲಿ ವ್ಯಾಸಂಗ ಪಡೆದ ನಿಮ್ಮ ಶಿಕ್ಷಣ ಜನಸಾಮಾನ್ಯರಿಗೆ ಮುಟ್ಟಬೇಕು, ಬಡರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವೈದ್ಯರು ನಡೆಯಬೇಕು, ಪ್ರತಿಯೊಬ್ಬ ರೋಗಿಗೂ ಆತ್ಮವಿಶ್ವಾಸದಿಂದ, ಪ್ರೀತಿಯಿಂದ, ಕರುಣಿಯಿಂದ ಉಪಚಾರಿಸಬೇಕು. ವೃದ್ಧಾಪ್ಯದಲ್ಲಿರುವ ವಯೋವೃದ್ಧರನ್ನು ದೇವರಂತೆ ಕಾಣಬೇಕು ಹಾಗೂ ಗುಣಾತ್ಮಕ ಚಿಕಿತ್ಸೆಯನ್ನು ನೀಡಬೇಕು ಎಂದರು.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್‌ ವೈದ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ, ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಮತ್ತಿತರ ರು ಭಾಗವಹಿಸಿದ್ದರು.